ಭ್ರೂಣಲಿಂಗ ಪತ್ತೆ ಶಿಾರ್ಹ ಅಪರಾಧ

district koppal health department pc pndt
Published on

ಕೊಪ್ಪಳ: ಸ್ಕಾ$ನಿಂಗ್​ ಸೆಂಟರ್​ಗಳಲ್ಲಿ ಭ್ರೂಣಲಿಂಗ ಪತ್ತೆ ಮಾಡುವುದು ಶಿಾರ್ಹ ಅಪರಾಧ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಲಿಂಗರಾಜು ಹೇಳಿದರು.

ನಗರದ ತಮ್ಮ ಕಚೇರಿಯಲ್ಲಿ ಗುರುವಾರ ಪಿಸಿ, ಪಿಎನ್​ಡಿಟಿ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಭ್ರೂಣಲಿಂಗ ಪತ್ತೆ ಮಾಡುವ ವೈದ್ಯರು ಮತ್ತು ಅದರಲ್ಲಿ ಭಾಗಿಯಾಗುವ ಸಾರ್ವಜನಿಕರಿಗೂ ಶಿೆ ಇದೆ. ಇಂಥ ಟನೆಗಳು ನಡೆಯಬಾರದು. ಸಾರ್ವಜನಿಕರಿಗೆ ಗಮನಕ್ಕೆ ಬಂದಲ್ಲಿ ನಮಗೆ ತಿಳಿಸಬೇಕು. ಕಾನೂನು ಮೀರಿದರೆ ವೈದ್ಯರಿಗೆ ಮೊದಲ ಬಾರಿ 10 ಸಾವಿರ ರೂ. ದಂಡ, 3 ವರ್ಷ ಜೈಲು ಶಿೆ, ಎರಡನೇ ಬಾರಿಗೆ 50 ಸಾವಿರ ದಂಡ, 5 ವರ್ಷ ಶಿೆ, ಸಹಕಾರ ನೀಡುವವರಿಗೆ 50 ಸಾವಿರದಿಂದ 1 ಲಕ್ಷ ರೂ.ವರೆಗೆ ದಂಡ, 3&5 ವರ್ಷ ಜೈಲು ಶಿೆ ಇರಲಿದೆ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ ಎಂ.ಎಚ್​. ಮಾತನಾಡಿ ಭ್ರೂಣಲಿಂಗ ಪತ್ತೆ, ಹತ್ಯೆ ಹತ್ಯೆ ನಡೆಯದಂತೆ ನಿಗಾ ವಹಿಸಲು ಜಿಲ್ಲಾ ಮಟ್ಟದಲ್ಲಿ ಸಲಹಾ ಸಮಿತಿ ಇದೆ. ಸಮಿತಿ ಸದಸ್ಯರು ಆಗಾಗ ಸ್ಕ್ಯಾನಿಂಗ್​ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಸಾರ್ವಜನಿಕರಿಂದ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಸಲಹಾ ಸಮಿತಿ ಅಧ್ಯಕ್ಷ ಕೆ.ಎಚ್​.ತೊಗರಿ, ಸದಸ್ಯರಾದ ಡಾ.ಗಿರೀಶ್​, ಡಾ.ಸುರೇಶ ಜಿ., ಶಂಕ್ರಪ್ಪ ಬಿ.ಸುರಳ್​, ಸಲೀಂ ಜಾನ್​, ಹರೀಶ ಜೋಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net