ಮುನಿರಾಬಾದ್​ನಲ್ಲಿ ನ್ಯೂಮೋನಿಯಾ ದಿನಾಚರಣೆ

district koppal health department numoniya children
Published on

ಕೊಪ್ಪಳ: ಮಕ್ಕಳನ್ನು ಕಾಡುವ ಸಮಸ್ಯೆಗಳಲ್ಲಿ ನ್ಯೂಮೋನಿಯಾವೂ ಒಂದು. ಈಬಗ್ಗೆ ಎಚ್ಚರದಿಂದ ಇರಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ತಿಳಿಸಿದರು.

ತಾಲೂಕಿನ ಮುನಿರಾಬಾದ್​ನಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವ ನ್ಯೂಮೋನಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಿಗೆ ಬರುವ 12 ಮಾರಕ ರೋಗಗಳ ವಿರುದ್ಧ ಈಗಾಗಲೆ ಎಲ್ಲ ಸರ್ಕಾರಿ ಆಸ್ಪತ್ರೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಮತ್ತು ಶಿಶುಗಳಿಗೆ ಲಸಿಕೆ ನೀಡಲಾಗುತ್ತಿದೆ. ನ್ಯುಮೋನಿಯಾ ಮಕ್ಕಳನ್ನು ಕಾಡುವ ಸಾಮಾನ್ಯ ರೋಗಗಳಲ್ಲಿ ಒಂದು. ತೀವ್ರ ನ್ಯುಮೋನಿಯಾದಿಂದ ಮಕ್ಕಳು ಮರಣ ತಪ್ಪಿಸಲು ಪ್ರತಿ ವರ್ಷ ನ.12 ರಂದು ವಿಶ್ವ ನ್ಯೂಮೋನಿಯ ದಿನಾಚರಣೆ ಆಚರಿಸಲಾಗುತ್ತಿದೆ. ರೋಗ ಹೇಗೆ ಹರಡುತ್ತದೆ, ಲಕ್ಷಣ, ನಿಯಂತ್ರಣ ಕ್ರಮ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಕೆಮ್ಮು, ಶೀತ ಹೆಚ್ಚಾಗುವಿಕೆ, ತೀವ್ರ ಉಸಿರಾಟ ತೊಂದರೆ, ಪಕ್ಕೆಸಳೆತ, ತೀವ್ರ ಜ್ವರ ನ್ಯೂಮೋನಿಯಾ ಲಕ್ಷಣ. ಈ ಲಕ್ಷಣಗಳು ಕಂಡಲ್ಲಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು ಎಂದರು.

ರೋಗದಿಂದ ಮಗು ರಸಲು ಹುಟ್ಟಿದ ಅರ್ಧ ಗಂಟೆಯೊಳಗೆ ತಾಯಿ ಎದೆ ಹಾಲು ನೀಡಬೇಕು. 6 ತಿಂಗಳವರೆಗೆ ತಾಯಿಹಾಲು ಬಿಟ್ಟು ಬೇರೆ ಆಹಾರ ನೀಡಬಾರದು. ಬಳಿಕ ಪೌಷ್ಠಿಕ ಆಹಾರ ನೀಡಬೇಕು. ಶುದ್ಧ ಕುಡಿವ ನೀರು, ಸಕಾಲದಲ್ಲಿ ಲಸಿಕೆ ಹಾಕಿಸುವಿಕೆಯಿಂದ ಮಗುವಿನ ಆರೋಗ್ಯ ಕಾಪಾಡಬಹುದು ಎಂದು ಸಲಹೆ ನೀಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪದ್ಮಾವತಿ, ಸಿಎಚ್​ಒ ಮಂಜುಳಾ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net