ಅತಿಸಾರ ಭೇದಿ ಮರಣ ಪ್ರಮಾಣ ಕಡಿಮೆಯಾಗಲಿ

district koppal health department namma clinic
Published on

ಕೊಪ್ಪಳ: ಪ್ರಪಂಚದಲ್ಲಿ ಅತಿಸಾರ ಭೇದಿಯಿಂದ 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಸೊನ್ನೆಗೆ ತರಬೇಕಿದೆ ಎಂದು ಜಿಲ್ಲಾ ಆರ್​ಸಿಎಚ್​ ಅಧಿಕಾರಿ ಡಾ.ಪ್ರಕಾಶ ವಿ. ಹೇಳಿದರು.

ನಗರದ ನಮ್ಮ ಕ್ಲಿನಿಕ್​ನಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಲುಷಿತ ನೀರು, ಆಹಾರ ಸೇವನೆಯಿಂದ ಅತಿಸಾರ ಭೇದಿ ಉಂಟಾಗುತ್ತದೆ. ಮಕ್ಕಳನ್ನು ರಸಲು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸಾಬೂನಿನಿಂದ ಕೈ ತೊಳೆವಂತೆ ಸಲಹೆ ನೀಡಬೇಕು. ಶುದ್ಧ ನೀರು ಸೇವಿಸಬೇಕು. ಮನೆ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಡ್ಡಾಯವಾಗಿ ಶೌಚಗೃಹ ಬಳಸಬೇಕು. ನವಜಾತ ಶಿಶುಗಳಿಗೆ 6 ತಿಂಗಳವರೆಗೆ ತಾಯಿ ಹಾಲು ಕುಡಿಸಬೇಕು. ಎಲ್ಲ ಅಗತ್ಯ ಲಸಿಕೆ ಹಾಕಿಸಿ. 6 ತಿಂಗಳ ಬಳಿಕ ಪೌಷ್ಟಿಕ ಆಹಾರ ನೀಡಿ. ಭೇದಿ ಆದಾಗ ಒಆರ್​ಎಸ್​ ದ್ರಾವಣ ಮತ್ತು ಝಿಂಕ್​ ಮಾತ್ರ ನೀಡಿ. ಅನಾರೋಗ್ಯ ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.

ನಮ್ಮ ಕ್ಲಿನಿಕ್​ ವೈದ್ಯಾಧಿಕಾರಿ ಡಾ.ಅಕ್ಷತಾ ಅವರು ತಾಯಿ ಹಾಲಿನ ಮಹತ್ವ ಕುರಿತು ತಿಳಿಸಿದರು. ಆರೋಗ್ಯ ಸುರಾಧಿಕಾರಿ ಸವಿತಾ ಒಆರ್​ಎಸ್​ ದ್ರಾವಣ ತಯಾರಿಸುವ ಪ್ರಾತ್ಯಕೆ ತೋರಿಸಿಕೊಟ್ಟರು.

ತಾಲೂಕು ವೈದ್ಯಾಧಿಕಾರಿ ಡಾ.ರಾಮಾಂಜನೇಯ, ಡಾ.ಮಹೇಶ ಉಮಚಗಿ, ಶಿವಾನಂದ ವಿ.ಪಿ., ಕಾರ್ಯಕ್ರಮ ಸಲಹೆಗಾರ ಜೈಹಿಂದ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net