

ಕೊಪ್ಪಳ: ಛಿದ್ರ ಮನಸ್ಥಿತಿ ಹೊಂದಿದವರು ಹಾಗೂ ಅವರ ಕುಟುಂಬದವರ ಬೆಂಬಲಕ್ಕೆ ಸಮುದಾಯ ನಿಲ್ಲಬೇಕೆಂದು ಮುನಿರಾಬಾದ್ ಐಆರ್ಬಿ ಪ್ರಾಚಾರ್ಯ ಡಾ.ರಾಮಕೃಷ್ಣ ಮುದ್ದೇಪಾಲ ಅಭಿಪ್ರಾಯಪಟ್ಟರು.
ತಾಲೂಕಿನ ಮುನಿರಾಬಾದ್ ಐಆರ್ಬಿ ತರಬೇತಿ ಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಸ್ಕಿಜೋಪ್ರೇನಿಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ರೋಗವು ಪ್ರಪಂಚದ 30 ಮಿಲಯನ್ ಜನರನ್ನು ಬಾಧಿಸುತ್ತಿದೆ. ಅನೇಕರಲ್ಲಿ ಇದೊಂದು ಕಳಂಕ ಎಂಬ ಭಾವನೆ ಇದೆ. ಅಂಥವರನ್ನು ಅರ್ಥ ಮಾಡಿಕೊಂಡು ಅವರಿಗೂ ಸಮಾನ ಅವಕಾಶ ನೀಡಬೇಕಿದೆ. ವ್ಯಕ್ತಿಗಳು, ಕುಟುಂಬದವರಿಗೆ ನಾವೆಲ್ಲ ನೆರವಾಗಬೇಕಿದೆ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಪ್ರಕಾಶ ಮಾತನಾಡಿ, ಒಂಟಿತನ ಕಡಿಮೆ ಮಾಡಿಕೊಳ್ಳಬೇಕು. ಸಮುದಾಯದೊಂದಿಗೆ ಬೆರೆಯಬೇಕು. ರೋಗಿಗಳನ್ನು ಪ್ರೋತ್ಸಾಹಿಸಬೇಕು. ನಾವು ನೀಡುವ ಸಣ್ಣ ಅವಕಾಶಗಳು ಅವರ ಜೀವನ ಬದಲಾವಣೆ ಮಾಡಬಲ್ಲವು ಎಂದರು.
ಮಾನಸಿಕ ತಜ್ಞೆ ಲಕ್ಷಿ$್ಮದೇವಿ ಮಾತನಾಡಿ, ಸ್ಕಿಜೋಪ್ರೇನಿಯಾ ರೋಗದ ಬಗ್ಗೆ ಎಲ್ಲರು ತಿಳಿಯಬೆಕು. ರೋಗಿಗಳೊಂದಿಗೆ ಸಹನಾಭೂತಿಯಿಂದ ವರ್ತಿಸಬೇಕು. ಉತ್ತಮ ಸಂವಹನ ಮೂಲಕ ಧೈರ್ಯ ತುಂಬಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಶಿವಾನಂದ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ, ಆಪ್ತ ಸಮಾಲೋಚಕಿ ಪುಷ್ಪಾ ತೆರೆಸಾ, ಡೆಪ್ಯೂಟಿ ಕಮಾಂಡೆಂಟ್ಗಳಾದ ಜೆ.ರೂಪೇಶ, ರಾಧಾಕೃಷ್ಣ ಅರಾವತ್, ಮಂಜಪ್ಪ ಕೋಟಿಹಾಳ ಇತರರಿದ್ದರು.