ಆಯುಷ್ಮಾನ್​ ಆರೋಗ್ಯ ಮಂದಿರದಲ್ಲಿ ಉತ್ತಮ ಪ್ರಗತಿ

district koppal health department dho lingaraju
Published on

ಕೊಪ್ಪಳ: ಆಯುಷ್ಮಾನ ಆರೋಗ್ಯ ಮಂದಿರಗಳ ರಾಜ್ಯ ಮಟ್ಟದ ಮೌಲ್ಯಮಾಪನ ವರದಿಯಲ್ಲಿ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ ಎಂದು ಡಿಎಚ್​ಒ ಡಾ ಟಿ.ಲಿಂಗರಾಜು ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಕೇಂದ್ರ ಕಚೇರಿಯಿಂದ ಪ್ರತಿ ತಿಂಗಳು ಆಯುಷ್ಮಾನ ಆರೋಗ್ಯ ಮಂದಿರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಆರೋಗ್ಯ ಸೇವೆಗಳಾಧರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ, -ಆಯುಷ್ಮಾನ ಆರೋಗ್ಯ ಮಂದಿರಗಳಿಗೆ ಮತ್ತು ಜಿಲ್ಲಾವಾರು ರ್ಯಾಕಿಂಗ್​ ನೀಡಲಾಗುತ್ತಿದೆ.

ಅದರನ್ವಯ ಕಳೆದ ಅಕ್ಟೋಬರ್​ನಲ್ಲಿ ಜಿಲ್ಲೆಯ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಟಾಪ್​ 10 ಬೆಸ್ಟ್​ ರ್ಯಾಂಕಿಂಗ್​ ಪಡೆದುಕೊಂಡಿವೆ. ಗೊಂಡಬಾಳ, ಕೂಕನಪಳ್ಳಿ ಹಾಗೂ ಬೆಣಕಲ್​ ಗ್ರಾಮದ ಆಯುಷ್ಮಾನ ಆರೋಗ್ಯ ಮಂದಿರಗಳು ಎಲ್ಲ ಆರೋಗ್ಯ ಕಾರ್ಯಕ್ರಮಗಳಲ್ಲಿ ಶೇ.100 ಗುರಿ ಸಾಧಿಸಿ ರಾಜ್ಯದಲ್ಲಿ ಮೊದಲ, ಎರಡನೇ ಹಾಗೂ 3ನೇ ಸ್ಥಾನ ಪಡೆದಿವೆ. ನವಲಿ ಹಾಗೂ ಹೂಲಗೇರ ಆಯುಷ್ಮಾನ ಆರೋಗ್ಯ ಮಂದಿರ ಶೇ.98 ಗುರಿ ಸಾಧಿಸಿ ರಾಜ್ಯದಲ್ಲಿ 4 ಮತ್ತು 5ನೇ ಸ್ಥಾನ ಪಡೆದಿವೆ. ಚಿಕೇನಕೊಪ್ಪ ಆರೋಗ್ಯ ಮಂದಿರ ಶೇ.97 ಗುರಿ ಸಾಧಿಸಿ 10ನೇ ಸ್ಥಾನ ಪಡೆದಿದೆ. ಜಿಲ್ಲಾವಾರು ರ್ಯಾಂಕಿಂಗ್​ನಲ್ಲಿ ಕೊಪ್ಪಳ ಜಿಲ್ಲೆ ರಾಜ್ಯ ಮಟ್ಟದಲ್ಲಿ 3ನೇ ಸ್ಥಾನ ಪಡೆದಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net