ಮಹರ್ಷಿ ವಾಲ್ಮೀಕಿ ಜಯಂತಿ 9ಕ್ಕೆ

district koppal hanumasagara village valmiki jayanthi
Published on

ಕೊಪ್ಪಳ: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ವಾಲ್ಮೀಕಿ ಯುವ ಪಡೆ ರಾಜ್ಯಾಧ್ಯಕ್ಷ ಮರಿಯಪ್ಪ ಎಂ. ಗ್ವಾತಗಿ ಹೇಳಿದರು.

ಹನುಮಸಾಗರ ಸಮೀಪದ ತುಮರಿಕೊಪ್ಪ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಶುಕ್ರವಾರ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಫೆ. 9 ಮತ್ತು 10 ರಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ, ಸರ್ವ ಧರ್ಮಗಳ ಸಾಮೂಹಿಕ ವಿವಾಹ ಹಾಗೂ ನೂತನ ಪುತ್ಥಳಿಗಳ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫೆ. 9 ರ ಬೆಳಗ್ಗೆ ಮಹರ್ಷಿ ವಾಲ್ಮೀಕಿ, ಶಿವಭಕ್ತ ಬೇಡರ ಕಣ್ಣಪ್ಪ, ಬಸವೇಶ್ವರ ಮೂರ್ತಿಗಳಿಗೆ ರುದ್ರಾಭಿಫಿೇಕ. ನಂತರ 101 ಕುಂಭ, ಕಳಸ, ಸಕಲ ವಾದ್ಯ ವೈಭವಗಳೊಂದಿಗೆ ಶ್ರೀ ಮಾರುತೇಶ್ವರ ದೇವಸ್ಥಾನದಿಂದ ವಾಲ್ಮೀಕಿ ದೇವಸ್ಥಾನದ ವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಯಲಿದೆ.

ಫೆ. 10 ರಂದು ಸರ್ವ ಧರ್ಮಗಳ ಸಾಮೂಹಿಕ ವಿವಾಹ, ನೂತನ ಈಶ್ವರ, ನಾಗದೇವತೆ, ರಾಜವೀರ ಮದಕರಿ ನಾಯಕ, ವೀರ ಸಿಂಧೂರ ಲಕ್ಷ್ಮಣ, ಮಹಾತ್ಮ ಗಾಂಧಿ ಪುತ್ಥಳಿಗಳ ಅನಾವರಣ ಕಾರ್ಯಕ್ರಮ ಜರುಗಲಿದೆ. ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ದಿವ್ಯ ಸಾನಿಧ್ಯ , ಉಸ್ಕಿಹಾಳ ವಾಲ್ಮೀಕಿ ಗುರು ಕುಲಾಶ್ರಮದ ಆತ್ಮಾನಂದ ಸ್ವಾಮೀಜಿ, ಹಿರೇಮನ್ನಪುರ ವಾಲ್ಮೀಕಿ ಗುರು ಕುಲಾಶ್ರಮದ ಪವನಕುಮಾರ ಸ್ವಾಮೀಜಿ, ಹುಲಿಹೈದರ ರಾಜಾನವೀನಚಂದ್ರ ನಾಯಕ ದೊರೆಗಳು ಕಾರ್ಯಕ್ರಮದ ಸಾನಿಧ್ಯ ವಹಿಸುವರು ಎಂದರು.

ಗ್ರಾಪಂ ಸದಸ್ಯರಾದ ಹನಮಂತ ಮೂಗನೂರು, ಮಹಾಂತೇಶ ಪೂಜಾರ, ಎಸ್ಡಿಎಂಸಿ ಅಧ್ಯಕ್ಷ ಯಮನೂರಪ್ಪ ಗಾಣದಾಳ, ಪ್ರಮುಖರಾದ ಹನಮಂತ ಲಂಡೂರಿ, ಬಸಣ್ಣ ನಸಗುನ್ನಿ, ಯಮನೂರಗೌಡ ಪರಸಾಪೂರ, ದ್ಯಾಮಣ್ಣ ಮೂಗನೂರು, ಹನಮಪ್ಪ ಗುಳಬಾಳ, ಮರಿಯಪ್ಪ ಕಾ. ಗ್ವಾತಗಿ, ದ್ಯಾಮಣ್ಣ ತುಗ್ಗಲಡೋಣಿ, ಲಕ್ಷ್ಮಣ ಹಲಕುರ್ಕಿ, ಪುಟ್ಟರಾಜ ಗಾಣದಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net