ಆಭರಣ ಕಳ್ಳರ ಬಂಧನ

Published on

ಕೊಪ್ಪಳ: ಹನುಮಸಾಗರದಲ್ಲಿ ಇತ್ತೀಚೆಗೆ ಓಂಕಾರ್​ ಜುವೆಲರಿ ಮಳಿಗೆಯಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 4.96 ಲಕ್ಷ ರೂ. ಮೌಲ್ಯದ ಬಂಗಾರ, ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಮೇ 9ರಂದು ಅಭಿಷೇಕ ಸಿಂಗ್ರಿ ಎಂಬುವವರ ಓಂಕಾರ್​ ಜುವೆಲರಿಯಲ್ಲಿ ಕಳ್ಳತನ ನಡೆದಿದೆ. ಅಂಗಡಿ ಬೀಗ ಮುರಿದು 5,32,104ರೂ. ಮೌಲ್ಯದ ಬೆಳ್ಳಿ ಆಭರಣ, 34 ಸಾವಿರ ರೂ. ಬೆಲೆಯ ಬಂಗಾರದ ಆಭರಣ ಕಳ್ಳತನ ಆದ ಬಗ್ಗೆ ಮಾಲೀಕರು ದೂರು ನೀಡಿದ್ದರು. ಕುಷ್ಟಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಸಿಂಧನೂರು ತಾಲೂಕಿನ ಹಸನಕಲ್​ ನಿವಾಸಿ ವೆಂಕಟೇಶ ಹಾಗೂ ಕೊಡಗು ಜಿಲ್ಲೆಯ ಕುಶಾಲನಗರದ, ಸದ್ಯ ಹುಬ್ಬಳ್ಳಿಯ ಆನಂದ ನಗರ ನಿವಾಸಿ ದುರಗಪ್ಪನನ್ನು ಬಂಧಿಸಿದ ಪೊಲೀಸರು ವಿಚಾರಿಸಿದ್ದಾರೆ. ಇಬ್ಬರೂ ಆಭರಣ ಕದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. 4,62,740ರೂ. ಮೌಲದ್ಯ 4.92 ಕೆಜಿ ಬೆಳ್ಳಿ ಆಭರಣ ಮತ್ತು 34 ಸಾವಿರ ರೂ.ನ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬುಧವಾರ ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ ಮಾಹಿತಿ ನೀಡಿದರು.

ಸಿಂಧನೂರಿನ ವೆಂಕಟೇಶ ಮೇಲೆ 4 ಪ್ರಕರಣಗಳಿವೆ. ಕಳ್ಳತನದಲ್ಲಿ ವಾಹನ ಸೇರಿ ಇನ್ನು ಹಲವು ಭಾಗಿಯಾದ ಮಾಹಿತಿ ಇದೆ. ಅವರೆಲ್ಲರನ್ನೂ ಶ್ರೀ ಬಂಧಿಸಲಾಗುವುದು. ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಪೊಲೀಸ್​ ಸಿಬ್ಬಂದಿಗೆ ವಿಶೇಷ ಬಹುಮಾನ ನೀಡುವುದಾಗಿ ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net