ಮಡಿಕೇರಿ ಗ್ರಾಮ ಸಭೆಯಲ್ಲಿ ಗದ್ದಲ

district koppal hanumasagara madikeri gp meeting
Published on

ಕೊಪ್ಪಳ : ಹನುಮಸಾಗರ ಸಮೀಪದ ಮಡಿಕೇರಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡ ಗ್ರಾಮ ಸಭೆಯಲ್ಲಿ ಗದ್ದಲದ ವಾತಾವರಣ ನಿಮಾರ್ಣವಾಯಿತು.

ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಬೆನಕನಾಳ ಗ್ರಾಪಂ ನಿಂದ ಹಮ್ಮಿಕೊಂಡ ಗ್ರಾಮ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಹಾಗೂ ಸಹಾಯಕ ಇಂಜಿನೀಯರ ಇಲ್ಲದೆ ಸಭೆ ಹೇಗೆ ಮಾಡುತ್ತಿರಾ ಎಂದು ಪಿಡಿಒ ನಾಗರತ್ನ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಕಳೆದ ನಾಲ್ಕು ವರ್ಫಿಗಳಿಂದ ಇಲ್ಲಿಯವರೆಗೆ ಇದು ಎರಡನೇ ಗ್ರಾಮ ಸಭೆಯಾಗಿದೆ. ಈ ನಾಲ್ಕು ವರ್ಫಿದಲ್ಲಿ ಗ್ರಾಮದಲ್ಲಿ ಯಾವ್ಯಾವ ಅಭಿವೃದ್ಧಿ ಕೆಲಸಗಳು ಆಗಿರುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಬೇಕು. ನೈರ್ಮಲ್ಯ ಹಾಗೂ ಕುಡಿಯುವ ನೀರಿಗೊಸ್ಕರ ಸಭೆ ಎಂದು ಹೇಳಲಾಗುತ್ತಿದೆ. ಗ್ರಾಮದಲ್ಲಿ ಕುಡಿಯುವ ನೀರು ಇರವುದಿಲ್ಲ. ಗ್ರಾಮಕ್ಕೆ ಯಾವುದೇ ಸಭೆಯಿರಲಿ, ಆಗಮಿಸುವಾಗ ಆ ಗ್ರಾಮಕ್ಕೆ ಸಂಬಂಸಿ ಎಲ್ಲ ಮಾಹಿತಿಯನ್ನು ತರಬೇಕಾಗಿತ್ತು.ವಿಕಲಚೇತನರಿಗೆ ಇಲ್ಲಿಯವರೆಗೆ ಶೇ.5 ರಫಿ್ಟು ಅನುದಾನವನ್ನು ನೀಡಿರುವದಿಲ್ಲ. ಇದು ಕಾಟಾಚಾರದ ಸಭೆಯಾಗಿದೆ. ಈ ಸಭೆ ಗ್ರಾಮಸ್ಥರ ಒತ್ಥಾಯದ ಮೇರೆಗೆ ನಡೆಸಲಾಗುತ್ತಿದೆ. ತಕ್ಷಣ ಸ್ಥಳಕ್ಕೆ ಅಧ್ಯಕ್ಷ, ಸಹಾಯಕ ಇಂಜಿನಿಯರ್​ ಬರಬೇಕು ಎಂದು ಪಟ್ಟು ಹಿಡಿದರು. ಗ್ರಾಮದಲ್ಲಿ ನಡೆದಿರುವ ಮನರೇಗಾ ಕಾಮಗಾರಿಯಲ್ಲಿ ಸಾಕಾಫಿ್ಟು ಅವ್ಯವಹಾರ ಆಗಿದೆ ಎಂದು ಸಾರ್ವಜನಿಕರು ದೂರಿದರು.

ಗ್ರಾಪಂ ಸದಸ್ಯ ಹನುಮಂತ ಬೆನಕನಾಳ ಮಾತನಾಡಿ, ಗ್ರಾಮದಲ್ಲಿ 14 ಲಕ್ಷದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ. ಶಾಲೆಯ ತಡೆಗೋಡೆ, ಸ್ಮಶಾನ ನಿಮಾರ್ಣ ಕಾಮಗಾರಿ ಕ್ರೀಯಾಯೋಜನೆಗೆ ಕಳುಹಿಸಲಾಗಿದೆ. ಇಫಿ್ಟು ಹೊರತುಪಡಿಸಿ ಇನ್ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ ಎಂದರು.

ಗ್ರಾಪಂ ಸದಸ್ಯರಾದ ಶಿವಮ್ಮ ಹಿರೇಮಠ, ಪರಶುರಾಮಪ್ಪ ಮೇಟಿಗೌಡರ, ಗ್ರಾಮಸ್ಥರಾದ ನಾಗರಾಜ ಈಳಗೇರ, ಸುಭಾಫಿ ಈಳಗೇರ, ಹನುಮಂತ ಪಲ್ಲೇದ, ಬಾಲಪ್ಪ ಗದ್ದಿ, ಮಹಾಂತೇಶ ಭಂಡಾರಿ, ಕಾಡಪ್ಪ ಗದ್ದಿ, ಮಹಾಂತೇಶ ಬಿಂಜವಾಡಗಿ, ಶಶಿಕುಮಾರ ಈಳಗೇರ, ಮಹಾಂತೇಶ ಕಂಬಳಿ, ಪಾಂಡುರಂಗ ಸಾಲಿ, ಗಿರಿಯಪ್ಪ ಗುರಿಕಾರ, ಮಹಾಂತೇಶ ಕಬ್ಬರಗಿ, ಯಲ್ಲನಗೌಡ ಪಾಟೀಲ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net