

ಕೊಪ್ಪಳ : ಆಧುನಿಕ ಜಗತ್ತಿನ ಜೀವನ ಶೈಲಿಯಿಂದಾಗಿ ಮನುಷ್ಯ ಇಂದು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾನೆ ಎಂದು ಫುಟ್ ಪಲ್ಸ್ ಥೆರಪಿ ಸಂಯೋಜಕ ನಾಗರಾಜ ಹೇಳಿದರು.
ಹನುಮಸಾಗರ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಕಸಾಪ, ಪತ್ರಿಕಾ ಬಳಗ, ಆದಿತ್ಯ ಯೋಗ ಸಂಸ್ಥೆ, ನಿಸರ್ಗ ಸಂಗೀತ ಶಾಲೆ, ಜೈ ಭವಾನಿ ಮಹಿಳಾ ಮಂಡಳಿ, ಸವೋರ್ದಯ ವಿಕಾಸ ಸಂಸ್ಥೆ ಹಾಗೂ ಕಂಪಾನಿಯೋ ವತಿಯಿಂದ ಹಮ್ಮಿಕೊಂಡ ಪೂಟ್ ಪಲ್ಸ್ ಥೆರೆಪಿ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯ ಉತ್ತಮವಾಗಿದೆ ಇಟ್ಟುಕೊಳ್ಳುವುದು ಇಂದು ಎಲ್ಲರಿಗೂ ಸವಾಲಾಗಿದೆ. ಆಧುನಿಕ ಆಹಾರ ಪದ್ಧತಿ, ಜೀವನ ಶೈಲಿ ಇದಕ್ಕೆ ಕಾರಣ. ಶಿಬಿರದ 13 ದಿನಗಳು ಪ್ರತಿನಿತ್ಯ 30 ನಿಮಿಫಿ ಚಿಕಿತ್ಸೆ ಪಡೆಯುವದರಿಂದ ದಿನಾಲು 5 ಕಿ.ಮೀ ವಾಕಿಂಗ್ ಮಾಡಿದಫಿ್ಟು ರಕ್ತ ಸಂಚಾರವಾಗುತ್ತದೆ. ಇದರಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ವೆರಿಕೋಸ್ ವೇನ್, ಸ್ನಾಯು ಸೆಳೆತ, ಊತ, ಪಾರ್ಕಿನ್ ಸನ್, ಸಯಾಟಿಕಾ ಸರ್ವಿಕಲ್ ಸ್ಪಾಂಡಿಲೈಟಸ್, ನಿದ್ರಾಹಿನತೆ, ಪಾರ್ಶ್ಚವಾಯು, ಥೈರಡ್, ಬೆನ್ನು ನೋವು, ಬೊಜ್ಜು ನಿವಾರಣೆ ಸೇರಿ ವಿವಿಧ ರೋಗಳಿಂದ ದೂರವಿರಲು ಇದು ಸಹಾಯವಾಗುತ್ತದೆ. ಸಾರ್ವಜನಿಕರು ಉಚಿತವಾಗಿ ಹಮ್ಮಿಕೊಂಡಿರುವ ಶಿಬಿರದಲ್ಲಿ ಭಾಗವಹಿಸಿ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಕಂಪಾನಿಯೋ ಸಂಸ್ಥೆಯ ಅಶೋಕ, ಸುಜೀತ್, ಕಸಾಪ ತಾಲೂಕಧ್ಯಕ್ಷ ಲೆಂಕಪ್ಪ ವಾಲಿಕಾರ, ಕಸಾಪ ತಾಲೂಕ ಮಾಜಿ ಅಧ್ಯಕ್ಷ ಶ್ರೀನಿವಾಸ ಜಹಗೀರದಾರ, ಮುಖಂಡರಾದ ಅಬ್ದುಲ್ಕರಿಂ ವಂಟೆಳಿ, ಸತೀಶ ಜಮಖಂಡಿಕರ, ಭಗೀರಥಸಾ ಪಾಟೀಲ್, ಮಾರುತಿಸಾ ರಂಗ್ರೇಜ್, ವಿಜಯೇಂದ್ರ ಕುಲಕರ್ಣಿ, ಮಲ್ಲಪ್ಪ ಹುಲಿ, ಮಹಾಂತೇಶ ಗವಾರಿ, ಸುನೀತಾ ಮಹಾಂತಯ್ಯ ಕೋಮಾರಿ, ವಿವಿಧ ಸಂಸ್ಥೆಗಳ ಸಂಘಟಕರು ಇದ್ದರು.