ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿ

district koppal hanumasagar village health cancer test
Published on

ಕೊಪ್ಪಳ: ಎಲ್ಲರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಮುದಾಯ ಆರೋಗ್ಯ ಅಧಿಕಾರಿ ಅಜಯಕುಮಾರ ದೇವೂರ ಹೇಳಿದರು.

ಹನುಮಸಾಗರ ಸಮೀಪದ ಕಾಟಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ವಿಶ್ವ ಕ್ಯಾನ್ಸರ್​ ದಿನಾಚರಣೆ ನಿಮಿತ್ತ ಜಾಗೃತಿ ಹಾಗೂ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾನ್ಯವಾಗಿ ಗುಟಕಾ ಸೇವಿಸುವದರಿಂದ ಬಾಯಿ ಕ್ಯಾನ್ಸರ್​ ಬರುತ್ತದೆ. ವಾಸಿಯಾಗದೇ ಇರುವ ಗಾಯ, ಬಹಳ ದಿನಗಳ ಕೆಮ್ಮು, ಊಟ ಮಾಡುವಾಗ ಗಂಟಲು ನೋವು ಇದು ಕ್ಯಾನ್ಸರ್​ ಲಕ್ಷಣವಾಗಿರುತ್ತದೆ. ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು. ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಕೋರಳಿನಂತಹ ಕ್ಯಾನ್ಸರ್​ ಇರುತ್ತವೆ. ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡು, ಆರೋಗ್ಯ ಸಮಸ್ಯೆ ಕಂಡು ಬಂದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಮುಖ್ಯ ಶಿಕ್ಷಕ ಶಿವಪ್ಪ ಚೊಳಚಗುಡ್ಡ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಸುಧಾ, ರಾಧಾ ರಾಠೋಡ, ವಿಜಯಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net