

ಕೊಪ್ಪಳ: ಗ್ರಾಮಸ್ಥರು ಸಹಕಾರ ನೀಡಿದರೆ ಮಾತ್ರ ತಾಲೂಕ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಆಯೋಜನೆ ಮಾಡಲು ಸಾಧ್ಯವಾಗುತ್ತದೆ ಎಂದು ಕಸಾಪ ನಿಕಟ ಪೂರ್ವ ಗೌರವ ಕಾರ್ಯದರ್ಶಿ ರವಿಂದ್ರ ಬಾಕಳೆ ಹೇಳಿದರು.
ಹನುಮಸಾಗರ ಸಮೀಪದ ಹೂಲಗೇರಾ ಗ್ರಾಮದ ಸಮಾಹಿಪ್ರಾ ಶಾಲೆಯಲ್ಲಿ 13ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಕುರಿತು ಚರ್ಚಿಸಲು ಹಮ್ಮಿಕೊಂಡ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.
ಕನ್ನಡ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ತನು, ಮನ, ಧನದಿಂದ ಒಗ್ಗಟ್ಟಿನಿಂದ ಶ್ರಮಿಸಬೇಕು. ಗ್ರಾಮಸ್ಥರು ಸಹಕಾರ ನೀಡಿದರೆ ಮಾತ್ರ ಸಮ್ಮೇಳನ ಯಶಸ್ವಿಯಾಗಲು ಸಾಧ್ಯ. ಹೂಲಗೇರಾ ಗ್ರಾಮದಲ್ಲಿ ಸಮ್ಮೇಳನ ನಡೆಯುವುದು ಐತಿಹಾಸಿಕವಾಗುತ್ತದೆ. ಬಂದ ಅತಿಥಿಗಳಿಗೆ ಊಟೋಪಹಾರ ವ್ಯವಸ್ಥೆ ಸೇರಿ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನೇರವೇರಲು ಸ್ಥಳಿಯರ ಸಹಕಾರದಿಂದ ಮಾತ್ರ ಸಾಧ್ಯ ಎಂದರು.
ಗ್ರಾಮದ ಜಿಪಂ ಮಾಜಿ ಸದಸ್ಯ ಪ್ರಕಾಶ ರಾಠೋಡ, ತಾಪಂ ಮಾಜಿ ಸದಸ್ಯರಾದ ಸುರೇಶ ಕುಂಟನಗೌಡ್ರ, ಶೇಖರ ಹೋರಪೇಟೆ ಮಾತನಾಡಿ, ನಮ್ಮ ಗ್ರಾಮದಲ್ಲಿ ತಾಲೂಕಾ ಮಟ್ಟದ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಫಿಯ. ಸಮ್ಮೇಳನದ ಯಶಸ್ವಿಗೆ ಬೇಕಾದ ಎಲ್ಲ ಸಹಕಾರವನ್ನು ಗ್ರಾಮಸ್ಥರೆಲ್ಲರೂ ತನು, ಮನ, ಧನ, ರೂಪದಲ್ಲಿ ಸಹಕಾರ ನೀಡುತ್ತೇವೆ ಎಂದರು.
ಕಸಾಪ ಕೇಂದ್ರ ಪ್ರತಿನಿಧಿ ನಬೀಸಾಬ ಕುಫ್ಟಿಗಿ, ಕಸಾಪ ತಾಲೂಕು ಅಧ್ಯಕ್ಷ ಲೆಂಕಪ್ಪ ವಾಲಿಕಾರ, ತಾಲೂಕಾ ಮಾಜಿ ಅಧ್ಯಕ್ಷ ಶ್ರೀನಿವಾಸ ಜಹಗೀರದಾರ, ಸ್ಥಳಿಯ ಘಟಕದ ಅಧ್ಯಕ್ಷ ಮಂಜುನಾಥ ಗುಳೆದಗುಡ್ಡ, ಕೋಶಾಧ್ಯಕ್ಷ ಅಬ್ದುಲ್ ಕರಿಂ ಒಂಟೇಳಿ, ಗ್ರಾಪಂ ಅಧ್ಯಕ್ಷೆ ಕವಿತಾ ರವಿ ಚವ್ವಾಣ, ಉಪಾಧ್ಯಕ್ಷೆ ಶಾಂತವ್ವ ಶಂಕ್ರಗೌಡಾ, ಸದಸ್ಯರಾದ ಲಕ್ಷ್ಮೀಬಾಯಿ ಚೌರದ, ವಿಜಯಲಕ್ಷ್ಮಿ ಶಂಕರ, ದಾಧೀಭಿ ಶ್ಯಾಮೀದಸಾಬ, ಮೈಬೂಬ ಹುಸೇನ್ ಉಂಡಿ, ಚಂದ್ರುಗೌಡ, ಯಂಕಪ್ಪ ತಳವಾರ, ಚಂದಪ್ಪ ಮಲ್ಲಪ್ಪ, ಶೋಬಾ ರಾಠೋಡ, ವೀರುಪಾಕ್ಷಗೌಡಾ ಹಾಲಬಾವಿ, ಚಂದ್ರಶೇಖರ, ಶರಣಪ್ಪ ಇತರರಿದ್ದರು.