ಹನುಮಸಾಗರದಲ್ಲಿ ಹೋಳಿ ಸಂಭ್ರಮ

district koppal hanumasagar holi festival celebration in koppal public ground
Published on

ಕೊಪ್ಪಳ: ಹನುಮಸಾಗರ ಪಟ್ಟಣದ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ಶುಕ್ರವಾರ ಹೋಳಿ ಹಬ್ಬದ ನಿಮಿತ್ತ ಯುವಕರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.

ಗೊರೆಬಿಹಾಳ, ಶ್ಯಾಡಲಗೇರಿ, ತುಗ್ಗಲಡೋಣಿ, ಹಿರೇಗೊಣ್ಣಾಗರ ಸೇರಿ ವಿವಿಧೆಡೆ ನಸುಕಿನ ಜಾವ ಕಾಮ ದಹನ ಮಾಡಿದ ಗ್ರಾಮದ ಯುವಕರು, ನಂತರ ಟಮಟೆ ಬಾರಿಸುವ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಾಯಿ ಬಡೆದುಕೊಂಡು ತಿರುಗಾಡಿ, ಒಬ್ಬರಿಗೊಬ್ಬರು ಪರಸ್ಪರ ಬಣ್ಣ ಎರಚಿಕೊಂಡರು.

ನಂತರ ಕೆಲ ಗ್ರಾಮಗಳಲ್ಲಿ ಯುವಕರು ರಸ್ತೆ ಮೇಲೆ ನಿಂತು ವಾಹನ ಸವಾರರಿಂದ ಹಣ ಎತ್ತುವುದು ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬಂತು. ಮಕ್ಕಳು ಯುವಕರು ಬಣ್ಣದಲ್ಲಿ ಆಯಲ್​, ಕೋಳಿ ಮೊಟ್ಟೆ ಬೇರಸಿ, ಹಾನಿಕಾರಕ ಕೆಮಿಕಲಯುಕ್ತ ಬಣ್ಣವನ್ನು ಪರಸ್ಪರ ಎರಚಿಕೊಂಡು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net