ಕೊಪ್ಪಳ: ಹಾಲುಮತ ಧರ್ಮ ಮತ್ತು ಪರಿಸರ ಜಾಗೃತಿಗಾಗಿ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಶ್ರೀ ಸಿದ್ದರಾಮಾನಂದ ಮಹಾಸ್ವಾಮೀಜಿ ಶ್ರಾವಣ ಯಾತ್ರೆ ಆರಂಭಿಸಿದ್ದಾರೆ. ಆ.8ರಂದು ಜಿಲ್ಲೆ ಪ್ರವೇಶಿಸಲಿದ್ದು, ಆ.10ರಂದು ಕೊಪ್ಪಳದ ಮಧುಶ್ರೀ ಗಾರ್ಡನ್ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಹಾಲುಮತ ಸಂಸತಿ ಪಾವಿತ್ರ$್ಯತೆ, ಆಚಾರ, ವಿಚಾರ ಮತ್ತು ಪರಿಸರ ರಕ್ಷಣೆ ಜಾಗೃತಿ ಅಂಗವಾಗಿ ಕಳೆದ 15 ವರ್ಷದಿಂದ ಶ್ರೀಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ತಾಲೂಕುವಾರು ಯಾತ್ರೆ ಹಮ್ಮಿಕೊಳ್ಳುತ್ತಿದ್ದಾರೆ. ಅನಾರೋಗ್ಯ ಕಾರಣ ಶ್ರೀಗಳು ಬಹುವರ್ಷದಿಂದ ಬಂದಿರಲಿಲ್ಲ. ಈ ವರ್ಷ ಅವರೇ ಖುದ್ದು ಯಾತ್ರೆ ಆರಂಭಿಸಿದ್ದಾರೆ. ಆ.8ರಂದು ಕುಷ್ಟಗಿ, ಯಲಬುರ್ಗಾ, ಕುಕನೂರು, ಆ.10ರಂದು ಬೆಳಗ್ಗೆ ಕನಕಗಿರಿ ಮಧ್ಯಾಹ್ನ ಕೊಪ್ಪಳ ತಾಲೂಕಿಗೆ ಆಗಮಿಸುವರು. ಅದರ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲ ಸಮುದಾಯದವರು ಹೆಚ್ಚಿನ ಸಂಖ್ಯೆಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಿದರು.
ತಾಲೂಕು ಅಧ್ಯಕ್ಷ ಮುದ್ದಪ್ಪ ಬೇವಿನಳ್ಳಿ ಮಾತನಾಡಿ, ಸಭೆಯಲ್ಲಿ ಸಸಿಗಳನ್ನು ವಿತರಿಸಲಾಗುವುದು. ಅಂತರ್ಜಲ ರಕ್ಷಣೆ, ತಾಪಮಾನ ಇಳೀಕೆ, ಶುದ್ಧಗಾಳಿ, ಸಕಾಲಿಕ ಮಳೆ, ಮನುಷ್ಯರ ಆರೋಗ್ಯ ಮತ್ತು ಜೀವಸಂಕುಲ ಉಳಿವಿನ ಬಗ್ಗೆ ಅರಿವು ಮೂಡಿಸಲಾಗುವುದೆಂದು ಮಾಹಿತಿ ನೀಡಿದರು.
ನಗರ ಟಕ ಅಧ್ಯಕ್ಷ ವಿರುಪಾಕ್ಷಪ್ಪ ಮೋರನಾಳ, ಜಿಲ್ಲಾ ಉಪಾಧ್ಯಕ್ಷ ಕುಬೇರ ಮಜ್ಜಿಗಿ ಇದ್ದರು.