ತಿಂಥಣಿಯಲ್ಲಿ ಹಾಲುಮತ ಸಂಸ್ಕೃತಿ ವೈಭವ ಜ.12ರಿಂದ

Halumath sanskritika vaibhava poster release in koppal zp ex president rajadhekhar hitnal
ಕೊಪ್ಪಳದಲ್ಲಿ ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಹಾಲುಮತ ಸಂಸ್ಕೃತಿ ವೈಭವ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಸಮುದಾಯ ಮುಖಂಡರು ಇದ್ದರು.
Published on

ಕೊಪ್ಪಳ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಜ.12, 13 ಮತ್ತು 14ರಂದು ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಜರಗಲಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಹೇಳಿದರು.

ಸಿಎಂ ಸಿದ್ದರಾಮಯ್ಯ, ಸಚಿವರಾದ ಪ್ರಿಯಾಂಕ್​ ರ್ಖಗೆ, ಸತೀಶ ಜಾರಕಿಹೊಳಿ, ಶಿವರಾಜ ತಂಗಡಗಿ ಸೇರಿ ವಿವಿಧ ಸಮಾಜದ ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಾವಿರಾರು ಜನರು ಸೇರಲಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಸಾಂಸ್ಕೃತಿ ಚಟುವಟಿಕೆಗಳು, ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆಯಿಂದಲೂ ಸಾವಿರಾರು ಜನರು ತೆರಳಲಿದ್ದು, ಹೆಚ್ಚಿನ ಸಂಖ್ಯೆಯ ಜನ ಭಾಗಿಯಾಗಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಸಾವಯವ ಕೃಷಿ ಉತ್ಪನ್ನ ಸಿರಿಧಾನ್ಯ ಮಳಿಗೆ, ಉಣ್ಣೆ ಉತ್ಪನ್ನ ಮಳಿಗೆ, ಹಾಲುಮತ ಸಾಹಿತ್ಯ ಮಳಿಗೆ ಮತ್ತು ಉಚಿತ ನೇತ್ರ ತಪಾಸಣೆ, ಬೀರಲಿಂಗೇಶ್ವರ ನಾಟಕ ಪ್ರದರ್ಶನ, ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನ, ಟಗರು ಕಾಳಗ, ಎತ್ತು ಭಾರ ಎಳೆವ ಸ್ಪರ್ಧೆ, ದಾಸೋಹ ಸೇವೆ ಇರಲಿದೆ ಎಂದು ವಿವರಿಸಿದರು. ಕುರುಬ ಸಮುದಾಯದ ಪ್ರಮುಖರಾದ ವೀರನಗೌಡ ಬಳೂಟಗಿ, ವಿರುಪಾಕ್ಷಪ್ಪ ಮೋರನಾಳ, ರಾಮಣ್ಣ ಹದ್ದಿನ, ಜಡಿಯಪ್ಪ ಬಂಗಾಳಿ, ಆನಂದ ಕಿನ್ನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net