ಹಳಕಟ್ಟಿ-ಅಪ್ಪಣ್ಣ ಜಯಂತಿಗೆ ಸಿದ್ಧತೆ ಮಾಡಿಕೊಳ್ಳಿ

district koppal halakatti appanna jayanthi adc sidrameshwar
Published on

ಕೊಪ್ಪಳ: ಡಾ.ಗು.ಹಳಕಟ್ಟಿ ಹಾಗೂ ಹಡಪದ ಅಪ್ಪಣ್ಣ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಸಂಬಂಧಿಸಿದ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಕೆಂಪೇಗೌಡ, ಡಾ..ಗು.ಹಳಕಟ್ಟಿ, ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಡಾ..ಗು.ಹಳಕಟ್ಟಿ ಜಯಂತಿ ಜುಲೈ 2ರಂದು ಬೆಳಗ್ಗೆ 8.30ಕ್ಕೆ ಕುಷ್ಟಗಿ ರಸ್ತೆಯಲ್ಲಿರುವ ಹಳಕಟ್ಟಿ ವೃತ್ತಕ್ಕೆ ಪುಷ್ಪಾರ್ಚನೆ ಮಾಡಲಾಗುವುದು. ಬೆಳಗ್ಗೆ 10.30ಕ್ಕೆ ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಇರಲಿದೆ. ವಿಶೇಷ ಉಪನ್ಯಾಸ, ಭಾವಚಿತ್ರಕ್ಕೆ ಪೂಜೆ ಇತರ ಕಾರ್ಯಕ್ರಮ ಇರಲಿವೆ. ಹಡಪದ ಅಪ್ಪಣ್ಣ ಜಯಂತಿ ಜುಲೈ 22ರಂದು ಬೆಳಗ್ಗೆ 8.30ಕ್ಕೆ ಅಪ್ಪಣ್ಣ ಭಾವಚಿತ್ರ ಮೆರವಣಿಗೆ ನಡೆಯಲಿದೆ. 10.30 ಗಂಟೆಗೆ ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಜೂ.27ರಂದು ಕೆಂಪೇಗೌಡ ಜಯಂತಿ ಸರಳವಾಗಿ ಆಚರಿಸಲಾಗುವುದು. ಜಯಂತಿ ದಿನದಂದು ಬೇಕಾದ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಿ. ಜನರಿಗೆ ಕುಡಿವ ನೀರು ಸೇರಿ ಅಗತ್ಯ ಸೌಕರ್ಯ ಕಲ್ಪಿಸಿ. ಸಮುದಾಯ ಮುಖಂಡರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.

ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ, ಪ್ರಮುಖರಾದ ಗವಿಸಿದ್ದಪ್ಪ ಕೊಪ್ಪಳ, ಈರಣ್ಣ ಕೊರ್ಲಳ್ಳಿ, ಹನುಮಂತ ಕಲಮಂಗಿ, ಶೇಖರ ಇಂಗಳದಾಳ, ಶರಣಬಸವ ಪಾಟೀಲ್​, ಗುಡದಪ್ಪ ಹಡಪದ, ವೀರಣ್ಣ ಸಂಕ್ಲಾಪುರ, ಈಶ್ವರಪ್ಪ ದಿನ್ನಿ, ಹನುಮಂತಪ್ಪ ಈಶ್ವರಪ್ಪ, ಮಂಜುನಾಥ ಹಡಪದ, ಶಿವುಕುಮಾರ ಕಾರಟಗಿ, ಮೌನೇಶ ಕೊಪ್ಪಳ, ದ್ಯಾಮಣ್ಣ ಮದಿನೂರ, ಈಶಪ್ಪ ಮುದ್ದಾಬಳ್ಳಿ, ವೀರುಪಾಕ್ಷಪ್ಪ ಮ್ಯಾದ್ನೇರಿ, ಬಸವರಾಜ್​ ಇಟಗಿ, ಶರಣಪ್ಪ ಇಟಗಿ, ಗವಿಸಿದ್ದಪ್ಪ ಮಾದಿನೂರ, ಮುತ್ತಣ್ಣ ಬೆಣಕಲ್​, ಬಸವರಾಜ್​ ಉಣಿಸಿಹಾಳ್​, ಅಂದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net