ಕೊಪ್ಪಳ: ಜಿಲ್ಲಾ ಹಡಪದ ಸಮುದಾಯಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಸಮುದಾಯ ಸಂಟನೆಗೆ ಆದ್ಯತೆ ನೀಡಲಾಗುವುದೆಂದು ಸಂಟನೆ ಜಿಲ್ಲಾಧ್ಯಕ್ಷ ಹನುಮಂತಪ್ಪ ಸರಿಗಮ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಮ್ಮದು ಸಣ್ಣ ಸಮುದಾಯ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದೇವೆ. ಜಿಲ್ಲೆಯಲ್ಲಿ 25 ಸಾವಿರ ಜನಸಂಖ್ಯೆ ಇದೆ. ನಿಮಗ ಇದ್ದರೂ ಅನುದಾನವಿಲ್ಲ. ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಸಮುದಾಯ ಸಂಟಿಸುತ್ತಿದ್ದೇವೆ. ರಾಜಕಾರಣಿಗಳು ನಮ್ಮ ಬೇಡಿಕೆಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ಇತ್ತೀಚೆಗೆ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಸದ್ಯ ಕೊಪ್ಪಳ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಅಂದಪ್ಪ ಸಂಗಾಪುರ, ವಿರುಪಾಕ್ಷಪ್ಪ ದೊಡ್ಡಮನಿ (ಉಪಾಧ್ಯಕ್ಷ), ಮಹೇಶ ಹಡಪದ (ಪ್ರ.ಕಾ), ನಿಂಗೆಶಪ್ಪ ಹಡಪದ (ಸ.ಕಾ), ಗವಿಸಿದ್ದಪ್ಪ ಹಡಪದ (ಖಜಾಂಚಿ), ನಿರ್ದೇಶಕರಾಗಿ ಮಾರುತೇಶ, ಈರಣ್ಣ, ಕಳಕಪ್ಪ, ಈಶ್ವರ, ವಿರೇಶ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು. ಪದಾಧಿಕಾರಿಗಳಾದ ಬಸವರಾಜ ಹಡಪದ, ಗುಂಡಪ್ಪ ಹಡಪದ, ಮಲ್ಲಪ್ಪ ಹಡಪದ, ಮಾರ್ಕಂಡಪ್ಪ, ಈಶಪ್ಪ ಮುದ್ದಾಬಳ್ಳಿ, ಬಸವರಾಜ ಹುಣಸಿಹಾಳ ಇದ್ದರು.