

ಕೊಪ್ಪಳ: ಸಮುದಾಯ ಅಭಿವೃದ್ಧಿಗೆ ಶಿಕ್ಷಣ ಬಹುಮುಖ್ಯ ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಪ್ಪಣ್ಣ ಬಸವಣ್ಣ ಅವರ ಅನುಭವ ಮಂಟಪದಲ್ಲಿ ಒಬ್ಬರಾಗಿದ್ದರು. ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು. ಎಲ್ಲರು ಸಮಾನರೆಂದು ಸಾರಿದರು. ಸಮಾಜದ ಅಂಕು&ಡೊಂಕುಗಳನ್ನು ತಿದ್ದಲು ಶ್ರಮಿಸಿದರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ಸಾಗೋಣ. ಹಡಪದ ಸಮುದಾಯದ ಕೊಡುಗೆ ಅಪಾರ. ನಾವೆಲ್ಲರೂ ನಮ್ಮ ಮಕ್ಕಳನ್ನು ಶಿತರನ್ನಾಗಿಸೋಣ. ಶರಣರು ಹಾಕಿಕೊಟ್ಟ ಸಮಾನತೆ ಹಾದಿಯಲ್ಲಿ ಸಾಗೋಣ ಎಂದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮಾತನಾಡಿ, ವಿಶ್ವದ ಮೊದಲ ಸಂಸತ್ತು ಎಂದು ಕರೆಯಲ್ಪಡುವ ಶರಣರ ಅನುಭವ ಮಂಟಪದಲ್ಲಿನ ಶರಣರಲ್ಲಿ ಅಪ್ಪಣ್ಣ ಒಬ್ಬರು. ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಹಡಪದರ ಮುಖ ನೋಡಬಾರದೆಂಬ ಸಾಮಾಜಿಕ ಪಿಡುಗು ತೊರೆಯಲು ಬಸವಣ್ಣ ತಮ್ಮನ್ನು ಕಾಣಲು ಬರುವವರು ಮೊದಲು ಅಪ್ಪಣ್ಣನನ್ನು ಕಾಣಬೇಕೆಂದಿದ್ದರು. 250ಕ್ಕೂ ಹೆಚ್ಚು ವಚನ ರಚಿಸಿದ್ದಾರೆ. ಎಲ್ಲ ವಚನಗಳಲ್ಲೂ ಉದಾತ್ತ ವಿಚಾರಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಪ್ರಾಚಾಯೆರ್ ಡಾ.ಮುಮ್ತಾಜ್ ಬೇಗಂ ವಿಶೇಷ ಉಪನ್ಯಾಸ ನೀಡಿದರು.
ನಗರಸಭೆ ಪೌರಾಯುಕ್ತ ಸುರೇಶ ಬಬಲಾದ, ತಾಪಂ ಸಹಾಯಕ ನಿರ್ದೇಶಕ ಮಹೇಶ ಎಚ್., ನಗರಸಭೆ ಸದಸ್ಯ ಬಸವಸ್ವಾಮಿ, ಕನ್ನಡ ಮತ್ತು ಸಂಸತಿ ಇಲಾಖೆ ಸಿಬ್ಬಂದಿ ಶಂಕರ, ಹಡಪದ ಸಮುದಾಯ ಮುಖಂಡರಾದ ಹನುಮಂತಪ್ಪ ಸರಿಗಮ, ಈಶಪ್ಪ ಮುದ್ದಬಳ್ಳಿ, ಅಂದಪ್ಪ, ಬಸವರಾಜ, ಗವಿಸಿದ್ದಪ್ಪ ಮಾದಿನೂರ, ಮೌನೇಶ ಹಡಪದ, ಶಿವಕುಮಾರ ಕಾರಟಗಿ ಇತರರಿದ್ದರು.