ನಾಳೆ ತರಗತಿ ಬಹಿಷ್ಕಾರ

district koppal guest lectuers issue students quit class
Published on

ಕೊಪ್ಪಳ: ಶೈಕ್ಷಣಿಕ ಗೊಂದಲ ಪರಿಹರಿಸಲು ಆಗ್ರಹಿಸಿ ಇಂದು (ಸೆ.27)ರಂದು ತರಗತಿ ಬಹಿಷ್ಕರಿಸುವುದಾಗಿ ತಿಳಿಸಿ ಪದವಿ ವಿದ್ಯಾರ್ಥಿಗಳು ಶುಕ್ರವಾರ ಮಹಿಳಾ ಕಾಲೇಜು ಪ್ರಾಚಾರ್ಯ ಡಾ.ಗಣಪತಿ ಲಮಾಣಿಗೆ ಮನವಿ ಸಲ್ಲಿಸಿದರು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಉಪನ್ಯಾಸಕರ ನೇಮಕದಲ್ಲಿ ಗೊಂದಲ ಏರ್ಪಟ್ಟಿದೆ. ಇದರಿಂದ ನಮಗೆ ಸಾಕಷ್ಟು ಸಮಸ್ಯೆ ಆಗಿದೆ. ಯುಜಿಸಿ ನಿಯಮಗಳು ಒಂದಡೆಯಾದರೆ, ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ. ಇವೆರಡರ ನಡುವೆ ನಮ್ಮ ಶೈಕ್ಷಣಿಕ ಜೀವನ ನಷ್ಟವಾಗುತ್ತಿದೆ. ದಿನಗಳು ಕಳೆಯುತ್ತಿದ್ದು, ಪರಿಹಾರ ಆಗುವ ಲಕ್ಷಣಗಳಿಲ್ಲ. ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದೀಗ ಸರ್ಕಾರದ ನಡೆ ಖಂಡಿಸಿ ತರಗತಿ ಬಹಿಷ್ಕರಿಸುತ್ತೇವೆಂದು ತಿಳಿಸಿದರು.

ಎಐಡಿಎಸ್​ಒ ಕಾರ್ಯಕರ್ತರಾದ ಶರಣಪ್ಪ, ತಿರುಪತಿ, ವಿದ್ಯಾರ್ಥಿಗಳಾದ ಭಾಗ್ಯ, ವಿಜಯಲಕ್ಷಿ$್ಮ, ಬಸಮ್ಮ, ಆಕಾಶ, ದುರ್ಗಾ, ಮನೋಹರ, ಸಿಂಧು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net