

ಕೊಪ್ಪಳ: ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಚಾರ ನೀಡಿ. ಜನರಿಗೆ ತಲುಪಿಸಿ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಸೂಚಿಸಿದರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಬುಧವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಜನರ ಅಭಿವೃದ್ಧಿಗಾಗಿ ಶಕ್ತಿ, ಗೃಹಲಕ್ಷಿ$್ಮ, ಗೃಹ ಜ್ಯೋತಿ, ಯುವನಿಧಿ ಯೋಜನೆ ಜಾರಿಯಾಗಿವೆ. ಜಿಲ್ಲೆಯಲ್ಲಿ ಎಲ್ಲ ಯೋಜನೆಗಳು ಅರ್ಹರಿಗೆ ಸಿಗಬೇಕು. ಯಾವೊಬ್ಬ ನೈಜಲಾನುಭವಿ ಯೋಜನೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ. ಪ್ರತಿ ತಿಂಗಳು ನಡೆವ ತಾಲೂಕು ಮಟ್ಟದ ಸಭೆಯ ನಡಾವಳಿಗಳು ಆಯಾ ತಿಂಗಳ 15ನೇ ತಾರೀಖಿನೊಳಗೆ ಜಿಲ್ಲಾ ಸಮಿತಿಗೆ ಸಲ್ಲಿಸಿ. ಇದರಿಂದ ಜಿಲ್ಲಾ ಮಟ್ಟದಲ್ಲಿ ಚರ್ಚೆಗೆ ಅನುಕೂಲ ಎಂದು ತಾಲೂಕು ಅಧ್ಯಕ್ಷರಿಗೆ ತಿಳಿಸಿದರು.
ಆಯಾ ತಾಲೂಕು ಸಿಡಿಪಿಒಗಳು ಗೃಹ ಲಕ್ಷಿ$್ಮ ಯೋಜನೆಯಡಿ ಬಾಕಿ ಪ್ರಕರಣಗಳ ವಿಲೇವಾರಿಗೆ ಆದ್ಯತೆ ನೀಡಿ. ಅರ್ಹರಿಗೆ ಪಡಿತರ ಚೀಟಿ ನೀಡಿ. ನ್ಯಾಯ ಬೆಲೆ ಅಂಗಡಿಗಳು ಸರಿಯಾದ ಸಮಯಕ್ಕೆ ತೆರೆಯುವಂತೆ ನೋಡಿಕೊಳ್ಳಿ. ಸರಿಯಾದ ಪ್ರಮಾಣದಲ್ಲಿ ಪಡಿತರ ವಿತರಿಸಿ. ಸಾರ್ವಜನಿಕರೊಂದಿಗೆ ಉತ್ತಮವಾಗಿ ವ್ಯವಹರಿಸಬೇಕು. ನ್ಯಾಯ ಬೆಲೆ ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಕ್ರಮವಹಿಸುವಂತೆ ಸಲಹೆ ನೀಡಿದರು.
ಗೃಹಲಕ್ಷಿ$್ಮಯಡಿ ಜಿಲ್ಲೆಯಲ್ಲಿ 3,21,494 ಜನ ನೋಂದಾಯಿಸಿದ್ದಾರೆ. 2023ರ ಆಗಸ್ಟ್ನಿಂದ ಈ ವರ್ಷದ ಆಗಸ್ಟ್ವರೆಗೆ 779 ಕೋಟಿ 35 ಲಕ್ಷ 72 ಸಾವಿರ ರೂ. ಪಾವತಿಸಲಾಗಿದೆ. ಗೃಹಜ್ಯೋತಿ ಅಡಿ 2,75,487 ಫಲಾನುಭವಿಗಳು ನೋಂದಣಿಯಾಗಿದ್ದು, ಅಕ್ಟೋಬರ್ ಮಾಸದ ಅಂತ್ಯಕ್ಕೆ 162.3 ಕೋಟಿ ರೂ.ಪಾವತಿಸಲಾಗಿದೆ. ಯುವನಿಧಿ ಅಡಿ 14,265 ಪದವಿಧರರಿಗೆ ತಿಂಗಳಿಗೆ 3ಸಾವಿರ ರೂ.ನಂತೆ 182 ಡಿಪ್ಲೊಮಾ ಪದವೀಧರರಿಗೆ 1,500ರೂ. ನಂತೆ 4.30 ಕೋಟಿ ರೂ. ನೀಡಲಾಗಿದೆ.
ಅನ್ನ ಭಾಗ್ಯ ಯೋಜನೆಯಡಿ ಆಗಸ್ಟ್ ಅಂತ್ಯಕ್ಕೆ 2,94,969 ಪಡಿತರ ಚೀಟಿಗಳಿಗೆ 17.98 ಕೋಟಿ ರೂ. ನೀಡಲಾಗಿದೆ. 2,35,108 ಪಡಿತರ ಚೀಟಿಗಳಿಗೆ ಮೊತ್ತ ಜಮೆ ಆಗಿದೆ. 59,861 ಚೀಟಿಗಳಿಗೆ 3.64 ಕೋಟಿ ರೂ. ಪಾವತಿ ಕಾರ್ಯ ಪ್ರಗತಿಯಲ್ಲಿದೆ. ಶಕ್ತಿ ಯೋಜನೆಯಡಿ 5.45 ಕೋಟಿ ಮಹಿಳಾ ಪ್ರಯಾಣಿಕರು ಅಕ್ಟೋಬರ್ ವರೆಗೆ ಪ್ರಯಾಣಿಸಿದ್ದಾರೆಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಪ್ರಾಧಿಕಾರ ಉಪಾಧ್ಯಕ್ಷರಾದ ಎಸ್.ಬಿ.ಖಾದ್ರಿ, ಅಮರೇಶಪ್ಪ ಎಸ್.ಜಿ., ನಾಗರಾಜ ಅರಳಿ, ಖಾಸಿಂಸಾಬ್, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮುಖ್ಯ ಯೋಜನಾ ನಿರ್ದೇಶಕ ಡಿ.ಮಂಜುನಾಥ, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್, ಜಿಲ್ಲಾ ಉದ್ಯೋಗ ವಿನಿಮತ ಅಧಿಕಾರಿ ಪ್ರಾಣೇಶ್, ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ ಇತರರಿದ್ದರು.