ಗ್ಯಾರಂಟಿಗಳನ್ನು ಸಮರ್ಪಕವಾಗಿ ತಲುಪಿಸಿ

district koppal guaruntee scheme review meeting
Published on

ಕೊಪ್ಪಳ: ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ವರವಾಗಿವೆ. ಅರ್ಹ ಲಾನುಭವಿಗಳಿಗೆ ಅವುಗಳನ್ನು ತಲುಪಿಸಿ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ತಾಲೂಕು ಅಧ್ಯಕ್ಷ ಬಾಲಚಂದ್ರನ್​ ಎಸ್​. ತಿಳಿಸಿದರು.

ನಗರದ ತಾಪಂ ಕಚೇರಿ ಆವರಣದಲ್ಲಿ ಸೋಮವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳ ಭಾವಚಿತ್ರ ಅಳವಡಿಸಬೇಕು. ಜತೆಗೆ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರ ೊಟೋ ಅಳವಡಿಸಿ ಎಂದು ಸದಸ್ಯರಾದ ದೇವರಾಜ ನಡುವಿನಮನಿ, ಜ್ಯೋತಿ ಗೊಂಡಬಾಳ ಒತ್ತಾಯಿಸಿದರು. ಆಹಾರ ನಿರೀಕ್ಷಕರು ಪಡಿತರ ಹಂಚುವಾಗ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿ. ಜಿಪಿಎಸ್​ ೋಟೋ ವಾಟ್ಸಾಪ್​ ಗ್ರೂಪ್​ನಲ್ಲಿ ಹಾಕಿ. ಆಹಾರ ಧಾನ್ಯ ವಿತರಿಸುವಾಗ ಸ್ಥಳಿಯರಿಗೆ ಮೊದಲ ಆದ್ಯತೆ ನೀಡಿ ಎಂದು ಆಗ್ರಹಿಸಿದರು.

ೆಬ್ರವರಿ, ಮಾರ್ಚ್​ ತಿಂಗಳಿನಲ್ಲಿ ಗೃಹಲಕ್ಷಿ$್ಮ ಹಣ ಜಮೆ ಆಗಿಲ್ಲ. ಈ ಬಗ್ಗೆ ಜಿಲ್ಲಾ ಸಮಿತಿಯಲ್ಲಿ ಚರ್ಚಿಸಿ. ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಿ. ಕುಷ್ಟಗಿ&ಕೊಪ್ಪಳ ತಡೆರಹಿತ ಬಸ್​ಗಳನ್ನು ಇರಕಲ್​ಗಡಾದಲ್ಲಿ ನಿಲ್ಲಿಸುವಂತೆ ಬೇಡಿಕೆ ಇದ್ದು, ಈ ಬಗ್ಗೆ ಕ್ರಮಕೈಗೊಳ್ಳಲು ಸಾರಿಗೆ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಸದಸ್ಯ ಮಾನ್ವಿ ಪಾಷಾ ಒತ್ತಾಯಿಸಿದರು. ಅದರಂತೆ ಕ್ರಮಕೈಗೊಳ್ಳಲು ಅಧ್ಯಕ್ಷರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ತಾಪಂ ಇಒ ದುಂಡಪ್ಪ ತುರಾದಿ, ತಹಸೀಲ್ದಾರ್​ ವಿಠ್ಠಲ್​ ಚೌಗಲಾ, ಸಮಿತಿ ಸದಸ್ಯರಾದ ರಾಮಣ್ಣ ಚೌಡ್ಕಿ, ಸವಿತಾ ಗೊರಂಟ್ಲಿ, ಅನ್ನದಾನಯ್ಯಸ್ವಾಮಿ, ಅನ್ವರ್​ ಹುಸೇನ್​ ಗಡಾದ, ಪರಶುರಾಮ ಕೊರವರ, ಆನಂದ ಕಿನ್ನಾಳ, ಲಕ್ಷ$್ಮಣ ಡೊಳ್ಳಿನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net