ಸ್ಥಳಿಯವಾಗಿ ಸಮಸ್ಯೆ ಪರಿಹಾರ, ರೆಡ್ಡಿ ಶ್ರೀನಿವಾಸ ಹೇಳಿಕೆ

district koppal guarantee schemes review reddi srinivas
Published on

ಕೊಪ್ಪಳ: ಗ್ಯಾರಂಟಿ ಯೋಜನೆಗಳ ಸಮಪರ್ಕ ಅನುಷ್ಠಾನಕ್ಕೆ ಹೋಬಳಿ ಹಂತದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸ್ಥಳಿಯವಾಗಿಯೇ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದೆಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.

ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಗ್ಯಾರಂಟಿ ಯೋಜನೆಗಳು ಬಡ, ಮಧ್ಯಮ ವರ್ಗದವರಿಗೆ ಅನುಕೂಲವಾಗಿವೆ. ಅರ್ಹರು ಯೋಜನೆಯಿಂದ ಹೊರಗುಳಿಯದಂತೆ ಪ್ರಗತಿ ಸಾಧಿಸಿ. ಅನುಷ್ಠಾನದಲ್ಲಿ ಇರುವ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ಗ್ರಾಪಂ ಹಂತದಲ್ಲಿ ಫಲಾನುಭವಿಗಳ ಜತೆಗೆ ಸಮಾಲೋಚನೆ ಮಾಡಿ. ಸಮಸ್ಯೆಗಳಿಗೆ ಸ್ಥಳಿಯವಾಗಿಯೇ ಪರಿಹಾರ ಕಲ್ಪಿಸಲು ಯೋಜಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಿ. ಡ್ಯಾಶ್​ ಬೋರ್ಡ್​ ಸಮಸ್ಯೆಯಿಂದ ಲಾನುಭವಿಗಳ ಮಾಹಿತಿ ಸರಿಯಾಗಿ ಸಿಗುತ್ತಿಲ್ಲ. ಅದನ್ನು ತಕ್ಷಣ ಸರಿಪಡಿಸಿ ಎಂದರು.

ಗೃಹ ಲಕ್ಷಿ$್ಮ ಯೋಜನೆಯಡಿ ಡಿಸೆಂಬರ್​ 2024ವರೆಗೆ 3 ಲಕ್ಷ ಲಾನುಭವಿಗಳಿಗೆ 1,030 ಕೋಟಿ ರೂ. ಪಾವತಿಯಾಗಿದೆ. ಯೋಜನೆಗೆ ಕಳೆದ ಎರಡು ತಿಂಗಳಲ್ಲಿ 598 ಲಾನುಭವಿಗಳು ನೋಂದಣಿಯಾಗಿದ್ದಾರೆ. ಅನ್ನ ಭಾಗ್ಯ ಅಕ್ಕಿ ಅಕ್ರಮ ಮಾರಾಟವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಅನ್ನಭಾಗ್ಯ ಯೋಜನೆ ಅಕ್ಕಿ ಮಾರಾಟ ಮಾಡಿದರೆ, ಅಂಥ ಫಲಾನುಭವಿಗಳ ಪಡಿತರ ಚೀಟಿ ರದ್ದುಪಡಿಸಲು ಅವಕಾಶವಿದೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ. ನ್ಯಾಯಬೆಲೆ ಅಂಗಡಿಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲು ಸಿಎಂ 10 ಕೋಟಿ ರೂ. ಅನುದಾನ ನೀಡಿದ್ದಾರೆ. ಜಿಲ್ಲೆಯ ಎಲ್ಲ ಅಂಗಡಿಗಳಿಗೆ ಕ್ಯಾಮೆರಾ ಅಳವಡಿಸಿ ಎಂದು ಸೂಚಿಸಿದರು.

ಗೃಹಲಕ್ಷಿ$್ಮ ಯೋಜನೆ 3,13,663 ಫಲಾನುಭವಿಗಳಿಗೆ 1030.27 ಕೋಟಿ ರೂ. ಪಾವತಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಫೆಬ್ರವರಿ- ಮಾಸಾಂತ್ಯದವರೆಗೆ 2,77,392 ಗ್ರಾಹಕರಿಗೆ ಉಚಿತ ವಿದ್ಯುತ್​ ಸೌಲಭ್ಯ ದೊರೆತಿದೆ. ಅನ್ನಭಾಗ್ಯ ಯೋಜನೆಯಡಿ ಡಿಸೆಂಬರ್​-2024ರ ಅಂತ್ಯದವರೆಗೆ 2,99,213 ಕಾರ್ಡುದಾರರಿಗೆ 18,39,92,530 ರೂ. ವೆಚ್ಚ ಭರಿಸಲಾಗಿದೆ. ಶಕ್ತಿಯೋಜನೆಯಡಿ ಫೆಬ್ರವರಿ- ಮಾಸಾಂತ್ಯಕ್ಕೆ 6.70 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಯುವನಿಧಿಯಡಿ ಮಾರ್ಚ್​ನಲ್ಲಿ 8,441 ಲಾನುಭವಿಗಳು ನೋಂದಣಿಯಾಗಿದ್ದು, 10.05 ಕೋಟಿರೂ. ಪಾವತಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಧಿಕಾರ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ತಾಲೂಕು ಮಟ್ಟದ ಪದಾಧಿಕಾರಿಗಳಿಗೆ ಜಿಪಂ ಸಿಇಒ ಗುರುತಿನ ಚೀಟಿ ವಿತರಿಸಿದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಪ್ರಾಧಿಕಾರ ಉಪಾಧ್ಯಕ್ಷರಾದ ಎಸ್​.ಬಿ.ಖಾದ್ರಿ, ನಾಗರಾಜ್​ ಅರಳಿ, ಅಮರೇಶ ಎಸ್​.ಗಾಂಜಿ, ಮಂಜುನಾಥ ಗೊಂಡಬಾಳ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net