ಹೋಬಳಿ ಲಾನುಭವಿಗಳ ಸಮಾವೇಶ, ರೆಡ್ಡಿ ಶ್ರೀನಿಸಾ ಹೇಳಿಕೆ

district koppal guarantee schemes reveiw meet reddi srinivas
Published on

ಕೊಪ್ಪಳ: ಹೋಬಳಿ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗುವುದೆಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.

ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಐದು ಗ್ಯಾರಂಟಿಗಳು ಬಡ, ಹಿಂದುಳಿದ ವರ್ಗಗಳ ಜನರಿಗೆ ಆಸರೆಯಾಗಿವೆ. ಯೋಜನೆಗಳ ಅನುಷ್ಠಾನದಲ್ಲಿ ಕೊಪ್ಪಳ ಉತ್ತಮ ಪ್ರಗತಿ ಸಾಧಿಸಿದೆ. ಹೋಬಳಿ ಮಟ್ಟದಲ್ಲಿ ಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಗಂಗಾವತಿ ತಾಲೂಕಿನ ಮರಳಿ ಗ್ರಾಮ ಆಯ್ಕೆ ಮಾಡಿದ್ದು, ಪೂರ್ವಭಾವಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಯೋಜನೆಗಳಡಿ ಶೇ.100ರಷ್ಟು ಪ್ರಗತಿ ಸಾಧಿಸಿ. ಗ್ರಾಪಂ ಸಭೆಗಳಲ್ಲೂ ಯೋಜನೆಗಳ ಬಗ್ಗೆ ಚರ್ಚಿಸಿ. ಸಮಸ್ಯೆಗಳಿದ್ದಲ್ಲಿ ಸಮಿತಿ, ಅಧಿಕಾರಿಗಳ ಗಮನಕ್ಕೆ ತನ್ನಿ. ಇದರಿಂದ ತಕ್ಷಣ ಪರಿಹಾರ ಕಂಡುಕೊಳ್ಳಲು ಅನುಕೂಲವಾಗಲಿದೆ ಎಂದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಮಾತನಾಡಿ, ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿವೆ. ಯೋಜನೆಗಳಿಂದ ಲಾಭ ಪಡೆದು ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾದ ಲಾನುಭವಿಗಳ ಯಶೋಗಾಥೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶ್ರೀ ಮಾಹಿತಿ ಸಲ್ಲಿಸುವಂತೆ ಸೂಚಿಸಿದರು.

ಗೃಹಲಕ್ಷಿ$್ಮ ಯೋಜನೆಯಡಿ 3,24,354 ಫಲಾನುಭವಿಗಳಿಗೆ ಜನವರಿ ಅಂತ್ಯದವರೆಗೆ 1093.09 ಕೋಟಿ ರೂ., ಗೃಹಜ್ಯೋತಿಯಡಿ ಮಾರ್ಚ್​ ಅಂತ್ಯಕ್ಕೆ 2,77,414 ಗ್ರಾಹಕರಿಗೆ ಉಚಿತ ವಿದ್ಯುತ್​ ಸೌಲಭ್ಯ ದೊರೆತಿದ್ದು, 231.35 ಕೋಟಿ ರೂ. ರ್ಖಚಾಗಿದೆ. ಅನ್ನಭಾಗ್ಯದಡಿ 2024ರ ಡಿಸೆಂಬರ್​ ಅಂತ್ಯಕ್ಕೆ 2,99,213 ಕಾರ್ಡುದಾರರಿಗೆ 18.39 ಕೋಟಿ ರೂ. ನೀಡಲಾಗಿದೆ. ೆಬ್ರವರಿಯಿಂದ ಅಕ್ಕಿ ನೀಡಲಾಗುತ್ತಿದೆ. ಶಕ್ತಿಯೋಜನೆಯಡಿ ಮಾರ್ಚ್​- ಅಂತ್ಯಕ್ಕೆ 7,02,25,246 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಯುವನಿಧಿ ಯೋಜನೆಯಡಿ 8,633 ನೋಂದಣಿಯಾಗಿದ್ದು 10.5 ಕೋಟಿ ರೂ. ಪಾವತಿಸಲಾಗಿದೆ ಎಂದು ಆಯಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಾಧಿಕಾರ ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ ಗೋಂಡಬಾಳ, ಖಾಸಿಂಸಾಬ ಮರ್ದಾನಸಾಬ, ನಾಗರಾಜ ಅರಳಿ, ಅಮರೇಶ ಎಸ್​.ಜಿ., ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net