

ಕೊಪ್ಪಳ: ಸರ್ಕಾರ ಬಡವರಿಗಾಗಿ ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಅರ್ಹ ಲಾನುಭವಿಗೆ ಯೋಜನೆ ತಲುಪಿಸುವಲ್ಲಿನ ಸಮಸ್ಯೆಗಳನ್ನು ಆಲಿಸಿ ಪರಿಹರಿಸಿ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲೂಕು ಅಧ್ಯಕ್ಷ ಬಾಲಚಂದ್ರನ್ ಎಸ್. ತಿಳಿಸಿದರು.
ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎಲ್ಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಆಹಾರ ಸಂಗ್ರಹಣೆ, ವಿತರಣೆ ಮತ್ತು ಆಹಾರ ಧಾನ್ಯ ಉಳಿದಿರುವ ಮಾಹಿತಿಯುಳ್ಳ ನಾಮಫಲಕಗಳನ್ನು ಅಳವಡಿಸಿ. ತಕ್ಷಣ ನಾಮಲಕ ಅಳವಡಿಸಿ. ಗೃಹಜ್ಯೋತಿ, ಶಕ್ತಿ, ಯುವನಿಧಿ, ಗೃಹಲಕ್ಷಿ$್ಮ, ಅನ್ನಭಾಗ್ಯ ಯೋಜನೆಗಳ ಲಾನುಭವಿಗಳ ಸಮಾವೇಶ ಮಾಡಲಾಗುವುದು. ಸಿಎಂ ಆಗಮಿಸಲಿದ್ದು, ಎಲ್ಲ ಅಧಿಕಾರಿಗಳು ನಿಮ್ಮ ಇಲಾಖೆ ಲಾನುಭವಿಗಳನ್ನು ಕರೆತನ್ನಿ ಎಂದರು.
ಸಿಡಿಪಿಒ ರೋಹಿಣಿ ಮಾತನಾಡಿ, 2024ರ ನವೆಂಬರ್, ಡಿಸೆಂಬರ್ ಮಾಸದ ಗೃಹ ಲಕ್ಷಿ$್ಮ ಹಣ ಬಿಡುಗಡೆಯಾಗಿದೆ. 2025ರ ಜನೆವರಿ ತಿಂಗಳ ವಂತಿಗೆ ಬಿಡುಗಡೆಯಾಗಿಲ್ಲ. ಬಂದ ತಕ್ಷಣ ಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದರು. ಆಹಾರ, ಜೆಸ್ಕಾಂ, ಕೌಶಲಾಭಿವೃದ್ಧಿ, ಸಾರಿಗೆ ಅಧಿಕಾರಿಗಳು ಇಲಾಖೆ ಪ್ರಗತಿ ಒಪ್ಪಿಸಿದರು.
ತಹಸೀಲ್ದಾರ್ ವಿಠ್ಠಲ್ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ತಾಲೂಕು ಸಮಿತಿ ಸದಸ್ಯರು ಇದ್ದರು.