ಅರ್ಹರು ಯೋಜನೆಯಿಂದ ಹೊರಗುಳಿಯದಿರಲಿ

district koppal guarantee scheme review meeting
Published on

ಕೊಪ್ಪಳ: ಅರ್ಹರು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್​ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ  ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ಯೋಜನೆಗಳು ಜನರಿಗೆ ಅನುಕೂಲವಾಗಿದೆ. ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ. ಎಲ್ಲ ಅರ್ಹರು ಯೋಜನೆ ಪಡೆಯಲಿ. ಯಾರೊಬ್ಬರೂ ಹೊರಗುಳಿಯದಿರಲಿ. ನ್ಯಾಯಬೆಲೆ ಅಂಗಡಿಯಲ್ಲಿಯೇ ಇಕೆವೈಸಿ ಸೌಲಭ್ಯವಿದ್ದು ಪ್ರಚಾರ ಮಾಡಿ. ಪಡಿತರ ವಿತರಣೆ ಸಮಯ ಹೆಚ್ಚಿಸಲಾಗಿದೆ. ಅದರಂತೆ ವಿತರಿಸಿ. ಆಹಾರ ಸಾಮಗ್ರಿ ಗುಣಮಟ್ಟ ಪರಿಶೀಲಿಸಿ. ಗೃಹಜ್ಯೋತಿಯಡಿ ಸಲ್ಲಿಕೆಯಾದ ಅರ್ಜಿ ವಿಲೇವಾರಿಗೊಳಿಸಿ. ತಾಂತ್ರಿಕ ಸಮಸ್ಯೆ ಇದ್ದರೆ ಸರಿಪಡಿಸಿ. ವಿದ್ಯುತ್​ ಬಿಲ್​ ವಸೂಲಿ ವೇಳೆ ಜೆಸ್ಕಾಂ ಸಿಬ್ಬಂದಿ ಜನರೊಡನೆ ಸೌಜನ್ಯದಿಂದ ವರ್ತಿಸಿ ಎಂದು ತಿಳಿಸಿದರು.

ಜಿಪಂ ಸಿಇಒ ವರ್ಣಿತ್​ ನೇಗಿ ಮಾತನಾಡಿ, ಕುಡಿವ ನೀರು ಯೋಜನೆಗಳು, ಅಂಗನವಾಡಿ, ಶಾಲೆಗಳ ವಿದ್ಯುತ್​ ಬಿಲ್​ ಬಾಕಿ ಇದ್ದರೆ ಸಂಪರ್ಕ ಕಡಿತ ಮಾಡದಂತೆ ತಾಕೀತು ಮಾಡಿದರು.

ಗೃಹಲಕ್ಷಿ$್ಮಯಡಿ 3,26,394 ಫಲಾನುಭವಿಗಳಿಗೆ ಮೇ- ಅಂತ್ಯದವರೆಗೆ 1203,88,38,000 ರೂ.ಪಾವತಿಸಲಾಗಿದೆ. ಗೃಹಜ್ಯೋತಿಯಡಿ ಜೂನ್​ ಅಂತ್ಯಕ್ಕೆ 2,76,653 ಗ್ರಾಹಕರಿಗೆ ಉಚಿತ ವಿದ್ಯುತ್​ ಸೌಲಭ್ಯ ದೊರೆತಿದೆ. 37,224 ಅಂತ್ಯೋದಯ (ಎಎವೈ), 2,91,265 ಪಿ.ಎಚ್​.ಎಚ್​.(ಬಿಪಿಎಲ್​) ಕಾರ್ಡ್​ಗಳಿಗೆ ಪಡಿತರ ವಿತರಿಸಲಾಗುತ್ತಿದೆ. ಶಕ್ತಿಯಡಿ ಜೂನ್​ನಲ್ಲಿ 33,94,421 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಯುವನಿಧಿಯಡಿ ಮೇನಲ್ಲಿ 6,455 ಫಲಾನುಭವಿಗಳು ನೋಂದಣಿಯಾಗಿದ್ದು, 15.17 ಕೋಟಿ ರೂ. ಪಾವತಿಸಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಯುವನಿಧಿಯಡಿ ಕೌಶಲ ತರಬೇತಿ ನೋಂದಣಿ ಜಾಗೃತಿ ಪೋಸ್ಟರ್​ ಬಿಡುಗಡೆಗೊಳಿಸಲಾಯಿತು. ಸಭೆ ಬಳಿಕ ಅನ್ನ ಸುವಿದಾ ಯೋಜನೆಯಡಿ ನಗರದ ಮ್ಯಾದಾರ ಓಣಿ ಲಾನುಭವಿಗಳ ಮನೆಗೆ ಪಡಿತರ ವಿತರಿಸಲಾಯಿತು.

ಪ್ರಾಧಿಕಾರ ಉಪಾಧ್ಯಕ್ಷರಾದ ಎಸ್​.ಬಿ.ಖಾದ್ರಿ, ಮಂಜುನಾಥ ಗೊಂಡಬಾಳ, ಅಮರೇಶಪ್ಪ ಎಸ್​.ಜಿ., ನಾಗರಾಜ ಅರಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net