

ಕೊಪ್ಪಳ: ತಾಲೂಕಿನ ದದೇಗಲ್ನ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೋಮಾ ಕೋರ್ಸ್ಗಳಿಗೆ ಪ್ರವೇಶ ಆರಂಭವಾಗಿದ್ದು, ಜೂನ್ 3ವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ವ್ಯವಸ್ಥಾಪಕ ಮೌನೇಶ ಠಾಠೋಡ್ ತಿಳಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ನಂತರ ಮುಂದೇನು ಎಂಬುದರ ಬಗ್ಗೆ ಅಷ್ಟಾಗಿ ಯೋಚಿಸುವುದಿಲ್ಲ. ಕೆಲವರು ಉನ್ನತ ಶಿಕ್ಷಣಕ್ಕೆ ಹೋದರೆ ಬಹುಪಾಲು ವಿದ್ಯಾರ್ಥಿಗಳು ಬೇರೆ ಬೇರೆ ಕೆಲಸಗಳತ್ತ ಚಿತ್ತ ಹರಿಸುತ್ತಾರೆ. ಅಂಥವರಿಗೆ ಜಿಟಿಟಿಸಿ ಉತ್ತಮ ಅವಕಾಶ ಒದಗಿಸುತ್ತಿದೆ. ನಮ್ಮ ಕಾಲೇಜಿನಲ್ಲಿ ಡಿಪ್ಲೋಮಾ ಇನ್ ಟೂಲ್ ಆ್ಯಂಡ್ ಡೈ ಮೆಕಿಂಗ್ ಇಂಜಿನಿಯರಿಂಗ್ ಹಾಗೂ ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ ಇಂಜಿನಿಯರಿಂಗ್, ಡಿಪ್ಲಾಮೋ ಇನ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಕೋರ್ಸ್ಗಳನ್ನು ಆರಂಭಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2021ರಲ್ಲಿ ಕಾಲೇಜು ಆರಂಭವಾಗಿದ್ದು, ಈ ವರ್ಷ 40 ವಿದ್ಯಾರ್ಥಿಗಳು ಹೊರ ಬಂದು ಉದ್ಯೋಗ ಪಡೆದಿದ್ದಾರೆ. ಕಾರ್ಖಾನೆಗಲ್ಲಿ ಕೆಲಸ ಮಾಡಲು ಬೇಕಾದ ಕೌಶಲಗಳನ್ನು ವೃತ್ತಿಪರವಾಗಿ ಕಲಿಸಲಾಗುತ್ತದೆ. ಶೇ.100ರಷ್ಟು ಉದ್ಯೋಗ ಭರವಸೆಯನ್ನು ನೀಡುತ್ತಿದ್ದೇವೆ. ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದ್ದು, ಸ್ಥಳಿಯ ಹಾಗೂ ಪ್ರಸಿದ್ಧ ಕಾರ್ಖಾನೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಅವರಿಗೆ ಅಗತ್ಯವಿರುವ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಮೂರು ಕೋರ್ಸ್ಗೆ ತಲಾ 60ರಂತೆ 180 ಸ್ಥಾನಗಳಿವೆ. ಈಗಾಗಲೇ 40ಕ್ಕೂ ಅಧಿಕ ಅರ್ಜಿ ಬಂದಿವೆ ಎಂದರು.
ಎಸ್ಸೆಸ್ಸೆಲ್ಸಿ ಉತ್ತೀರ್ಣ, ಪಿಯುಸಿ ಅನುತ್ತೀರ್ಣರಾದವರು ಕೋರ್ಸ್ ಸೇರಬಹುದು. ಐಟಿಐ ಮತ್ತು ವಿಜ್ಞಾನ ವಿಭಾಗದಲ್ಲಿ ದ್ವೀತಿಯ ಪಿಯುಸಿ ಪಾಸಾದವರಿಗೆ ನೇರವಾಗಿ ಎರಡನೇ ವರ್ಷಕ್ಕೆ ಪ್ರವೇಶ ನೀಡಲಾಗುವುದು. ವರ್ಷಕ್ಕೆ 31 ಸಾವಿರ ರೂ. ಶುಲ್ಕವಿದ್ದು, ಸರ್ಕಾರ ಶಿಷ್ಯವೇತನ ನೀಡಲಿದೆ. ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯವಿದೆ. ಜೂನ್ 3ವರೆಗೆ ಅವಧಿ ವಿಸ್ತರಿಸಿದ್ದು, ಆಸಕ್ತರು ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.
ಮಾಹಿತಿಗಾಗಿ 7507094445, 9902397658, 9986088894, 8792919763ಸಂಖ್ಯೆಗೆ ಸಂಪರ್ಕಿಸಬಹುದೆಂದು ತಿಳಿಸಿದರು. ಇಂಜಿನಿಯರ್ ಅಂಜಿನಪ್ಪ, ಉಪನ್ಯಾಸಕರಾದ ಮುತ್ತಣ್ಣ, ಷಕ್ಷಾವಲಿ ಇದ್ದರು.