ಕೊಪ್ಪಳ: ತಾಲೂಕಿನ ದದೇಗಲ್ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಮೇ 3ರಿಂದ ಪ್ರವೇಶ ಆರಂಭವಾಗಿದ್ದು 15ವರೆಗೆ ಎಸ್ಸೆಸ್ಸೆಲ್ಸಿ ಪಾಸಾದ ಮಕ್ಕಳು ಪ್ರವೇಶ ಪಡೆಯುವಂತೆ ಸಂಸ್ಥೆ ನಿರ್ವಾಹಕ ಮೌನೇಶ ರಾಠೋಡ್ ತಿಳಿಸಿದರು.
ನಮ್ಮಲ್ಲಿ ಸಂಪೂರ್ಣ ಉದ್ಯೋಗ ಭರವಸೆ ನೀಡುತ್ತೇವೆ. ಕಳೆದ ಬ್ಯಾಚ್ನಲ್ಲಿ 57 ಮಕ್ಕಳು ಉದ್ಯೋಗವಕಾಶ ಪಡೆದುಕೊಂಡಿದ್ದಾರೆ. ನಮ್ಮಲ್ಲಿ ಡಿಪ್ಲೋಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್, ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್, ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಕೋರ್ಸ್ಗಳಿವೆ. ಎಸ್ಸೆಸ್ಸೆಲ್ಸಿ ಪಾಸ್ ಆದವರು, ಐಟಿಐ ಮಾಡಿದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯವಿದೆ. 180 ಸೀಟ್ ಲಭ್ಯವಿದ್ದು ಈಗಾಗಲೇ 12 ಸೀಟ್ ಭರ್ತಿಯಾಗಿವೆ. ಬಹಳಷ್ಟು ಜನರಿಗೆ ಎಸ್ಸೆಸ್ಸೆಲ್ಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಜಿಟಿಟಿಸಿ ಉತ್ತರವಾಗಿ ನಿಲ್ಲುತ್ತಿದೆ ಎಂದರು.
ನಮ್ಮಲ್ಲಿ ತರಬೇತಿ ಪಡೆದ ಎಲ್ಲರಿಗೂ ಶೇ.100ರಷ್ಟು ಉದ್ಯೋಗ ಭರವಸೆ ನೀಡುತ್ತೇವೆ. ಎರಡು ಹಂತದಲ್ಲಿ ಶುಲ್ಕ ಭರಿಸಲು ಅವಕಾಶವಿದೆ. ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಯಲ್ಲೂ ಬೋಧನೆ, ಪರೀೆ ಬರೆಯಬಹುದು. ಶೇ.70ರಷ್ಟು ಪ್ರಾಯೋಗಿಕ ಕಲಿಕೆ ಇರಲಿದೆ. ಕೋರ್ಸ್ ಮುಗಿದ ನಂತರ ಒಂದು ವರ್ಷ ಕಡ್ಡಾಯವಾಗಿ ಶಿಶುಕ್ಷು ತರಬೇತಿ ಇರಲಿದೆ. ಆಗಲೂ ಗೌರವಧನ ಸಿಗಲಿದೆ. ನಮ್ಮ ಭಾಗದ ವಿದ್ಯಾರ್ಥಿಗಳು ಸೌಲಭ್ಯ ಸದುಪಯೋಗ ಪಡೆಯಬೇಕು. ಮಾಹಿತಿಗೆ 7507094445, 9620057086, 998608894 ಸಂಪರ್ಕಿಸಲು ಮನವಿ ಮಾಡಿದರು. ಪ್ರಾಚಾರ್ಯ ಪ್ರಭುರಾಜ, ಉಪನ್ಯಾಸಕರಾದ ಷಾವಲಿ, ಸೈಯದ್ ಆಜನ್ ಇದ್ದರು.