

ಕೊಪ್ಪಳ: ಸರ್ಕಾರದ ಗೃಹ ಲಕ್ಷ್ಮೀ ಗ್ಯಾರಂಟಿ ಯೋಜನೆ ಸದ್ಬಳಕೆ ಮಾಡಿಕೊಂಡು ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ತಾಲೂಕಿನ ಅರಸಿನಕೇರಿ ಗ್ರಾಮದಲ್ಲಿ ಮಹಿಳೆಯೊಬ್ಬರು ಹಣ ಕೂಡಿಟ್ಟು ಅಂಗಡಿ ತೆರೆದಿದ್ದಾರೆ.
ಗ್ರಾಮದ ಸುಮಿತ್ರ ವೆಂಕಟೇಶ ಸಂಗಟಿ ಅಂಗಡಿ ಆರಂಭಿಸಿದ ಮಹಿಳೆ. ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಎರಡು ಸಾವಿರ ರೂ. ಸರ್ಕಾರ ನೀಡುತ್ತಿದೆ. ಕಳೆದೊಂದು ವರ್ಷದಿಂದ ಬಂದ ಹಣವನ್ನು ಬಳಕೆ ಮಾಡಿಲ್ಲ. ಬದಲಿಗೆ ಕೂಡಿಟ್ಟು ಅಂಗಡಿ ಪ್ರಾರಂಭಿಸಿದ್ದಾರೆ. ಸಣ್ಣಪುಟ್ಟ ಚಿಲ್ಲರೆ ವ್ಯಾಪಾರ ಮಾಡುತ್ತಿದ್ದಾರೆ. ಝರಾಕ್ಸ್ ಸೇವೆ ಆರಂಭಿಸಿದ್ದು, ಬದುಕು ಕಟ್ಟಿಕೊಳ್ಳಲು ಅನುಕೂಲವಾಗಿದೆ. ಅಂಗಡಿ ಆರಂಭಕ್ಕೆ 32 ಸಾವಿರ ರೂ. ರ್ಖಚಾಗಿದೆ. ಕಳೆದ ಬುಧವಾರ (ಡಿ.18)ರಂದು ಪೂಜೆ ಸಲ್ಲಿಸಿ ಅಂಗಡಿ ಪ್ರಾರಂಭಿಸಿದ್ದಾಗಿ ಸುಮಿತ್ರ ತಿಳಿಸಿದ್ದಾರೆ.