ದ್ರಾಕ್ಷಿ ಕೆಜಿಗೆ 8 ಲಕ್ಷ ರೂ. !

district koppal greps mela costly greps
Published on

ಕೊಪ್ಪಳ: ಒಂದು ಕೆಜಿ ದ್ರಾಕ್ಷಿಗೆ ಅಬ್ಬಬ್ಬಾ ಅಂದ್ರೆ 80, 100 ಇಲ್ಲ ಅಂದ್ರೆ 200 ರೂ. ಬೆಲೆ ಸಾಮಾನ್ಯ. ಆದರೆ, ಕೊಪ್ಪಳದಲ್ಲಿ ಶಿವರಾತ್ರಿ ಅಂಗವಾಗಿ ಏರ್ಪಡಿಸಿದ ಹಣ್ಣುಗಳ ಪ್ರದರ್ಶನದಲ್ಲಿ ಜಗತ್ತಿನ ದುಬಾರಿ ದ್ರಾ ಖ್ಯಾತಿಯ ರೂಬಿ ರೋಮನ್​ ಹಣ್ಣು ಆಗಮಿಸಿದ್ದು ನೋಡುಗರ ಗಮನ ಸೆಳೆಯುತ್ತಿದೆ.

ಇದು ಜಪಾನ್​ ತಳಿಯಾಗಿದ್ದು, ಮೇಳದ ಆಕರ್ಷಣೆಯಾಗಿದೆ. ಪ್ರತಿ ಕೆಜಿಗೆ 8 ಲಕ್ಷ ರೂ. ಬೆಲೆ ಇದೆ. ಮುಂಬೈ ಮೂಲದ ವ್ಯಾಪಾರಿಗಳ ಮೂಲಕ 4 ಲಕ್ಷರೂ. ಖರ್ಚು ಮಾಡಿ ಅರ್ಧ ಕೆಜಿಯಷ್ಟು ರೂಬಿ ರೋಮನ್​ ದ್ರಾ ತರಿಸಲಾಗಿದೆ. ಮೇಳದಲ್ಲಿ ತರಹೇವಾರಿ ಹಣ್ಣುಗಳಿದ್ದು, ಶಿವರಾತ್ರಿ ಮುಗಿವವರೆಗೆ ಪ್ರದರ್ಶನ ಮತ್ತು ಮರಾಟ ಇರಲಿದೆ. ಈ ಹಿಂದೆ ಜಗತ್ತಿನ ದುಬಾರಿ ಮಾವು ಖ್ಯಾತಿಯ ಮಿಯಾ ಜಾಕಿ ಪ್ರದರ್ಶಿಸಲಾಗಿತ್ತು. ಇದರ ಬೆಲೆ ಕೆಜಿಗೆ 2.5ಲಕ್ಷ ರೂ. ಈ ವರ್ಷ ದುಬಾರಿ ದ್ರಾ ಆಗಮಿಸಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net