ಕೊಪ್ಪಳ: ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಕೇಂದ್ರ ಆರಂಭಿಸಿದ್ದು ನೋಂದಣಿ ಮಾಡಿಕೊಳ್ಳುವಂತೆ ರೈತರಿಗೆ ಸೂಚಿಸಲಾಗಿದೆ.
ಪ್ರತಿ ಕ್ವಿಂಟಾಲ್ಗೆ 8,768ರೂ.ನಂತೆ ಗರಿಷ್ಠ 38 ಸಾವಿರ ಮೆಟ್ರಿಕ್ ಟನ್ ಖರೀದಿಗೆ ಸರ್ಕಾರ ಸೂಚಿಸಿದೆ. ಯಲಬುರ್ಗಾ ಟಿಎಪಿಸಿಎಂಎಸ್, ಕುಕನೂರು, ಬನ್ನಿಕೊಪ್ಪ, ಚಿಕ್ಕೇನಕೊಪ್ಪ, ತೊಂಡಿಹಾಳ, ಮುಧೋಳ, ತಾವರಗೇರಾ, ಹನುಮಸಾಗರ, ಹಿರೇ ಸಿಂದೋಗಿ, ಮುದ್ದಾಬಳ್ಳಿ ಪಿಎಸಿಎಸ್, ಮಂಡಲಗೇರಿ ಎ್ಇಒ ಎರೆಯ ದೊರೆ, ಕವಲೂರು ಏಜೆನ್ಸಿಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಪ್ರತಿ ಎಕರೆಗೆ 3 ಕ್ವಿಂಟಾಲ್ನಂತೆ ಗರಿಷ್ಠ 15 ಕ್ವಿಂಟಾಲ್ ಹೆಸರು ಕಾಳು ಖರೀದಿಸಲಾಗುವುದು. ಮಾಹಿತಿಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಶಾಖಾ ವ್ಯವಸ್ಥಾಪಕ ದೂ.ಸಂ: 08539&-230040 ಸಂಪರ್ಕಿಸಲು ಸಹಾಯಕ ಕೃಷಿ ನಿದೇಶಕರು ತಿಳಿಸಿದ್ದಾರೆ.