ಹೋರಿ ಹಾಯ್ದು ಅಜ್ಜಿಗೆ ಗಾಯ

Grand mother injured by bull in Bahaddoorbandi village at Koppal
Published on

ಕೊಪ್ಪಳ: ತಾಲೂಕಿನ ಬಹದ್ದೂರ ಬಂಡಿ ಗ್ರಾಮದಲ್ಲಿ ಹೋರಿ ಹಾಯ್ದು ಅಜ್ಜಿಯೋರ್ವಳು ಗಂಭೀರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಗ್ರಾಮದ ಹನುಮನವ್ವ (65) ಗಾಯಗೊಂಡ ವೃದ್ಧೆ. ತಿಂಗಳ ಹಿಂದೆ ಹೊಸದಾಗಿ ಜೋಡು ಹೋರಿ ಖರೀದಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಆಹಾರ ನೀಡಲು ಅಜ್ಜಿ ತೆರಳಿದ್ದಾಳೆ. ಈ ವೇಳೆ ಕೊಂಬಿನಿಂದ ಹೊಟ್ಟೆಗೆ ತಿವಿದಿದ್ದು, ತೀವ್ರ ಗಾಯಗೊಂಡಿದ್ದಾಳೆ. ಕರಳು ಹೊರ ಬಂದಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net