ಪಂಚಾಯಿತಿ ನೌಕರರೆಂದು ಆದೇಶಿಸಿ

district koppal grama panchayat workers protest
Published on

ಕೊಪ್ಪಳ: ಕನಿಷ್ಠ ವೇತನ ಸೇರಿ ಇತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂದ ಪದಾಧಿಕಾರಿಗಳು ಬುಧವಾರ ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಮ್ಮ ವಿವಿಧ 19 ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಿಲ್ಲ. ಬೆಂಗಳೂರಿನಲ್ಲಿ ಧರಣಿ ನಡೆಸಿದಾಗ ವಾರದಲ್ಲಿ ಈಡೇರಿಸುವ ಭರವಸೆ ಸರ್ಕಾರ ನೀಡಿದೆ. ಬಳಿಕ ಅನೇಕ ಸಭೆ ನಡೆಸಿ ವರದಿ ಪಡೆಯಲಾಗಿದೆ. ಆರ್ಥಿಕ ಇಲಾಖೆಗೂ ಸಲ್ಲಿಸಿದೆ. ಆದರೆ, ಮುಂದಿನ ಪ್ರಗತಿ ಕಾಣುತ್ತಿಲ್ಲ. ಸಚಿವ ಪ್ರಿಯಾಂಕ್​ ರ್ಖಗೆ ಮನೆ ಮುತ್ತಿಗೆ ಹಾಕಿ ಆಗ್ರಹಿಸಿದರೂ ಸರ್ಕಾರ ಬಗ್ಗುತ್ತಿಲ್ಲ. ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಕರವಸೂಲಿಗಾರ, ಕ್ಲರ್ಕ್​, ನೀರಗಂಟಿ, ಡಾಟಾ ಎಂಟ್ರಿ ಆಪರೇಟರ್​, ಜವಾನ, ಸ್ವಚ್ಛತಾಗಾರರನ್ನು ಸರ್ಕಾರಿ ನೌಕರರೆಂದು ಘೋಷಿಸಿ. ಕನಿಷ್ಠ ವೇತನ ಪಾವತಿಸಿ. ಮಾಸಾಶನ ನೀಡಿ. ವರ್ಗಾವಣೆಗೆ ಅವಕಾಶ ಕಲ್ಪಿಸಿ. ಆದಾಯಕ್ಕನುಗುಣವಾಗಿ ಕರವಸೂಲಿಗಾರರ ವೇತನ ನಿಗದಿಪಡಿಸಿ. ಎಲ್ಲ ಗ್ರಾಪಂಗಳಿಗೆ ಲೆಕ್ಕ ಸಹಾಯಕ ಹುದ್ದೆ ಸೃಜಿಸಬೇಕು. ಶೇ.60ರಷ್ಟು ಪಿಡಿಒ ಹುದ್ದೆಗಳನ್ನು ಗ್ರೇಡ್​&1 ಕಾರ್ಯದರ್ಶಿಗೆ ನೀಡವಬೇಕು. ನೌಕರರಿಗೆ ಆಸ್ಪತ್ರೆ ವೆಚ್ಚ ಭರಿಸಬೇಕು. ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಈ ಮಾಸಾಂತ್ಯದೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಜೈಲ ಭರೋ ಚಳವಳಿ ನಡೆಸಲಿದ್ದೇವೆಂದು ಎಚ್ಚರಿಸಿದರು.

ಸಿಐಟಿಯು ಪದಾಧಿಕಾರಿಗಳಾದ ನಿರುಪಾದಿ ಬೆಣಕಲ್​, ಕಾಸಿಂ ಸರ್ದಾರ, ಗ್ರಾಪಂ ನೌಕರರ ಪದಾಧಿಕಾರಿಗಳಾದ ರಾಜು, ನಾರಾಯಣ ದೊಡ್ಮನಿ, ರವೀಂದ್ರನಾಥ, ಪ್ರಕಾಶ ವಾಲ್ಮೀಕಿ, ಮೋಹನ, ಅಂಬರೀಶ, ಆಂಜನೇಯ, ಚಂದ್ರಶೇಖರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net