ತ್ಯಾಜ್ಯ ಸಂಗ್ರಹಣ ಶುಲ್ಕ ಪಾವತಿಸಿ

district koppal gp zp pd prakash
Published on

ಕೊಪ್ಪಳ: ಗ್ರಾಪಂ ಪಟ್ಟದಲ್ಲಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಅದರ ನಿರ್ವಹಣೆಗೆ ಜನರು ಸಂಗ್ರಹಣ ಶುಲ್ಕ ಪಾವತಿಸುವಂತೆ ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ. ತಿಳಿಸಿದರು.

ತಾಲೂಕಿನ ಗಿಣಿಗೇರಾದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತ್ಯಾಜ್ಯ ಸಂಗ್ರಹಣಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.

ಮನೆ, ವಾಣಿಜ್ಯ ಮಳಿಗೆ, ಹೋಟೆಲ್​, ಅಂಗಡಿ ಮಾಲಿಕರು ಪ್ರತಿ ತಿಂಗಳು ಅವಧಿಯೊಳಗೆ ಗ್ರಾಪಂಗೆ ಶುಲ್ಕ ಪಾವತಿಸಿ. ಇದರಿಂದ ನಿರ್ವಹಣೆಗೆ ಅನುಕೂಲವಾಗಲಿದೆ ಎಂದರು.

ಬಳಿಕ ಬಿಳೇಬಾವಿ ಗ್ರಾಮದ ಗೋದಿಬೆಂಚಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು. ಮಹಿಳೆಯರು ಹೆಚ್ಚಾಗಿ ಕೂಲಿಕೆಲಸಕ್ಕೆ ಹಾಜರಾಗಿ. ಕೆಲಸಕ್ಕೆ ತಕ್ಕ ಕೂಲಿ ಪಡೆಯುವಂತೆ ಮನವಿ ಮಾಡಿದರು. ಆನ್​ಲೈನ್​ ಹಾಜರಾತಿ ಪರಿಶೀಲಿಸಿದರು. ತಾಪಂ ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಗಿಣಿಗೇರಾ ಪಿಡಿಒ ಮಂಜುಳಾದೇವಿ ಹೂಗಾರ, ಬೇರ್​ುಟ್​ ಟೆಕ್ನಿಷಿಯನ್​ ಗಾಳೆಪ್ಪ ದೊಡ್ಮನಿ, ಕಾಯಕ ಮಿತ್ರ ಶಾರದಾ ಇದ್ದರು.

ಗೊಂಡಬಾಳದಲ್ಲೂ ಅಭಿಯಾನ

ಕೊಪ್ಪಳ ತಾಲೂಕಿನ ಗೊಂಡಬಾಳದಲ್ಲೂ ತ್ಯಾಜ್ಯ ಸಂಗ್ರಹಣ ಶುಲ್ಕ ಅಭಿಯಾನ ನಡೆಸಲಾಯಿತು. ಅವಿಧಯೊಳಗೆ ಶುಲ್ಕ ಪಾವತಿಗೆ ತಾಪಂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಮನವಿ ಮಾಡಿದರು. ಪ್ರತಿ ಮನೆಯಲ್ಲಿ ಹಸಿ, ಒಣ ಕಸ ವಿಂಗಡಿಸಿ ಸ್ವಚ್ಛ ವಾಹಿನಿಗೆ ನೀಡಬೇಕು. ಇದರಿಂದ ಕಸ ಪ್ರತ್ಯೇಕಿಸಲು ಅನುಕೂಲವಾಗಲಿದೆ ಎಂದರು. ಎಸ್​ಬಿಎಂ ಜಿಲ್ಲಾ ಐಇಸಿ ಸಂಯೋಜಕ ಮಾರುತಿ ನಾಯಕರ್​, ಗೊಂಡಬಾಳ ಪಿಡೊ ಜಯಲಕ್ಷಿ$್ಮ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಕಾರ್ಯದರ್ಶಿ ಗವಿಸಿದ್ದಯ್ಯ ಗಂಧದ, ಕರವಸೂಲಿಗಾರ ಮಹೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net