ತಡೆಗೋಡೆ ನಿರ್ಮಾಣಕ್ಕೆ ವಿದ್ಯಾರ್ಥಿನಿಯಿಂದ ದೇಣಿಗೆ

district koppal govt school student gave donate money compound work
Published on

ಕೊಪ್ಪಳ: ತಾಲೂಕಿನ ಬಹಾದ್ದೂರಬಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ತನ್ನ ಶಾಲೆ ತಡೆಗೋಡೆ ನಿರ್ಮಾಣಕ್ಕೆ 5001ರೂ. ದೇಣಿಗೆ ನೀಡಿ ಮಾದರಿಯಾಗಿದ್ದಾಳೆ.

7ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಪೀಜಾ ಸಣ್ಣ ಮಸೂತಿ ದೇಣಿಗೆ ನೀಡಿದ ಮಗು. ತನ್ನ ತಾಯಿ ಸಲೀಮಾಬೇಗಂ ನಿತ್ಯ ಖರ್ಚಿಗೆ ನೀಡುತ್ತಿದ್ದ ಹಣವನ್ನು ಕೂಡಿಟ್ಟಿದ್ದಳು. ಶಾಲೆ ತಡೆಗೋಡೆ ಎತ್ತರ ಕಡಿಮೆ ಇದೆ. ಅದನ್ನು ಎತ್ತರಿಸಲು ಮುಖ್ಯ ಶಿಕ್ಷಕರು ಹಳೇ ವಿದ್ಯಾರ್ಥಿಗಳು ಹಾಗೂ ದಾನಿಗಳ ಸಭೆ ಕರೆದಿದ್ದರು. ವಿಷಯ ತಿಳಿದ ಪೀಜಾ ತಾನು ಸಂಗ್ರಹಿಸಿದ ಹಣವನ್ನು ನೀಡಿದ್ದಾಳೆ.

ಚಿಕ್ಕ ವಯಸ್ಸಿಗೆ ವಿದ್ಯಾರ್ಥಿನಿ ತೋರಿದ ಮಾದರಿ ನಡೆಗೆ ಶಾಲಾ ಅಭಿವೃದ್ಧಿ ಸಮಿತಿ ಸನ್ಮಾನಿಸಿ ಗೌರವಿಸಿದೆ. ಸಮಿತಿ ಅಧ್ಯಕ್ಷ ಮಂಜುನಾಥ ಕುರಿ, ಸದಸ್ಯರಾದ ಬಾಬಾ ಕಿಲ್ಲೇದಾರ, ಮಾಜಿ ಅಧ್ಯಕ್ಷ ಪ್ರಭು ಹೊಸಮನಿ, ಸಿಆರ್​ಪಿ ಹನುಮಂತಪ್ಪ ಕುರಿ, ಮುಖ್ಯ ಶಿಕ್ಷಕ ಬೀರಪ್ಪ ಅಂಡಗಿ, ಶಿಕ್ಷಕರಾದ ಶರಣಪ್ಪಗೌಡ, ಭಾರತಿ ಉಪಾಧ್ಯಯ, ಜ್ಯೋತಿಲಕ್ಷಿ$್ಮ, ಪೂರ್ಣಿಮಾ ತುಪ್ಪದ, ಮಮತಾ, ಗಂಗಮ್ಮ, ಮಾಧವಿ, ಹನುಮಪ್ಪ ಕಬ್ಬೇರ, ರಾಜಾ ಹುಸೇನ, ಗೀತಾ ಕುರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net