ಮುಖ್ಯ ಶಿಕ್ಷಕನಿಗೆ ತರಾಟೆ

Published on

ಕೊಪ್ಪಳ: ದರ ಹೆಚ್ಚಳ ನೆಪ ಮಾಡಿ ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳಿಗೆ ಮೊಟ್ಟೆ ವಿತರಿಸದ ಮುಖ್ಯ ಶಿಕ್ಷಕನಿಗೆ ತಹಸೀಲ್ದಾರ್​ ವಿಠ್ಠಲ ಚೌಗಲಾ ತರಾಟೆ ತೆಗೆದುಕೊಂಡರು.

ತಾಲೂಕಿನ ಶಿವಪುರ ಸರ್ಕಾರಿ ಪ್ರಾಥಮಿಕ ಶಾಲೆಗೆ ಜ.2ರಂದು ದಿಢೀರ್​ ಭೇಟಿ ನೀಡಿದ ತಹಸೀಲ್ದಾರ್​ ಮಕ್ಕಳು ಬಿಸಿಯೂಟ ಸವಿಯುತ್ತಿದ್ದನ್ನು ಗಮನಿಸಿದ್ದಾರೆ. ಮೊಟ್ಟೆ ನೀಡಿಲ್ಲವಾ ಎಂದು ಕೇಳಿದಾಗ ಮಕ್ಕಳು ನೀಡಿಲ್ಲವೆಂದಿದ್ದಾರೆ. ಯಾಕೆ ವಿತರಿಸಿಲ್ಲವೆಂದು ಮುಖ್ಯ ಶಿಕ್ಷಕ ವಿರುಪಣ್ಣಗೆ ಪ್ರಶ್ನಿಸಿದ್ದಾರೆ. ಮೊಟ್ಟೆ ದರ ಹೆಚ್ಚಳವಾಗಿದ್ದರಿಂದ ನೀಡುತ್ತಿಲ್ಲವೆಂದು ಶಿಕ್ಷಕ ಉತ್ತರಿಸಿದ್ದಾರೆ. ಇದರಿಂದ ಗರಂ ಆದ ತಹಸೀಲ್ದಾರ್​ ಸರ್ಕಾರ ಮೊಟ್ಟೆ ನೀಡಲು ತಿಳಿಸಿದೆ. ಹಣ ನೀಡುತ್ತಿದೆ. ನೀವೇನು ನಿಮ್ಮ ಮನೆಯಿಂದ ಹಣ ತಂದು ನೀಡುತ್ತೀರಾ ? ಎಂದು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಸರ್ಕಾರದ ಸೂಚನೆಯಂತೆ ಮಧ್ಯಾಹ್ನದ ಬಿಸಿಯೂಟಕ್ಕೆ ಮೊಟ್ಟೆ ನೀಡಲೇಬೇಕೆಂದು ತಾಕೀತು ಮಾಡಿದ ವಿಡಿಯೋ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net