ಕೊಪ್ಪಳ: ಸಾಕಷ್ಟು ಜಿದ್ದಾಜಿದ್ದಿಗೆ ವೇದಿಕೆ ಕಲ್ಪಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂದ ನಿರ್ದೇಶಕರ ಚುನಾವಣೆ ಶನಿವಾರ ಪೂರ್ಣಗೊಂಡಿದ್ದು 21 ನಿರ್ದೇಶರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತು.
ಒಟ್ಟು 66 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಎಪಿಎಂಸಿ ವಿಭಾಗದಿಂದ ಸಲ್ಲಿಕೆಯಾದ ಅರ್ಜಿ ತಿರಸ್ಕಾರಗೊಂಡ ಕಾರಣ 65 ಸ್ಥಾನಗಳಿಗೆ ಚುನಾವಣೆ ನಡೆಯಿತು. ನಾಮಪತ್ರ ಹಿಂಪಡೆವ ಕೊನೆಯ ದಿನ ಕೆಲವರು ವಾಪಸ್ ಪಡೆದ ಹಿನ್ನೆಲೆಯಲ್ಲಿ 44 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು. ಬಾಕಿ 21 ಸ್ಥಾನಗಳಿಗೆ ಕೊಪ್ಪಳದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆಯಿತು. ಬೆಳಗ್ಗೆಯಿಂದ ಸಂಜೆವರೆಗೆ ಮತದಾನ ನಡೆದರೆ, ಸಂಜೆ ನಂತರ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ತಡರಾತ್ರಿವರೆಗೂ ನಡೆದ ಎಣಿಕೆಯಲ್ಲಿ ಅಂತಿಮವಾಗಿ 21 ನಿರ್ದೇಶಕರನ್ನು ಘೋಷಿಸಲಾಯಿತು.
ಕೃಷಿ ಇಲಾಖೆಯಿಂದ ಬಿ.ಸತ್ಯನಾರಾಯಣ, ಪಶು ಇಲಾಖೆಯಿಂದ ಪಂಚಪ್ಪ, ಜಿಪಂನಿಂದ ಹುಸೇನಸಾಬ್ ಕೆ., ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ರಮೇಶ ಹುಬ್ಬಳ್ಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜಗುರು ಬಸಲಿಂಗಮ್ಮ, ಗ್ರಂಥಾಲಯ ಇಲಾಖೆಯಿಂದ ನಾಗರಾಜ ನಾಯಕ ಡೊಳ್ಳಿನ್, ಸಹಕಾರ ಇಲಾಖೆಯಿಂದ ಶಂಕರಪ್ಪ, ಸರ್ಕಾರಿ ಶಾಲೆಗಳಿಂದ ಬೀರಪ್ಪ ಅಂಡಗಿ, ಬಾಳಪ್ಪ ಕಾಳೆ, ಪ್ರಾಣೇಶ ಪೂಜಾರ, ಶಿವಪ್ಪ ಜೋಗಿ, ಶರಣಪ್ಪ ರಡ್ಡೇರ, ಪ್ರೌಢ ಶಾಲಾ ವಿಭಾಗದಿಂದ ಸಿದ್ದಪ್ಪ ಕುರಿ, ಹೇಮಣ್ಣ, ಪದವಿ ಕಾಲೇಜುಗಳಿಂದ ಮಂಜುನಾಥ ಆರೆಂಟನೂರು, ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಮಂಜುನಾಥ, ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಿಂದ ಮುರ್ತುಜಾ ಕಂದಗಲ್, ನ್ಯಾಯಾಂಗ ಇಲಾಖೆಯಿಂದ ಬಸವರಾಜ ಬಿಸೆರೊಟ್ಟಿ, ದೇವಪ್ಪ ಕೋಳದ, ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಕಚೇರಿಯಿಂದ ಗಂಗಾಧರ ವಿ.ಕೆ. ನಿರ್ದೇಶಕರಾಗಿ ಚುನಾಯಿತರಾದರು.