

ಕೊಪ್ಪಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾ ಚುನಾವಣೆ ಅಂತಿಮ ಟ್ಟ ತಲುಪಿದೆ. ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಬಹುತೇಕ ಅವಿರೋಧ ಆಯ್ಕೆ ಆಗಲಿದ್ದು, ಘೋಷಣೆಯೊಂದೆ ಬಾಕಿ ಇದೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ, ಆರೋಗ್ಯ ಇಲಾಖೆಯ ನಾಗರಾಜ ಜುಮ್ಮನ್ನವರ, ಖಜಾಂಚಿ ಸ್ಥಾನಕ್ಕೆ ಜಲಸಂಪನ್ಮೂಲ ಇಲಾಖೆಯ ಜಯತೀರ್ಥ ದೇಸಾಯಿ ಹಾಗೂ ರಾಜ್ಯ ಪರಿಷತ್ ಸ್ಥಾನಕ್ಕೆ ಕಂದಾಯ ಇಲಾಖೆ ಮುಹಮದ್ ಆಸ್ೀ ಅಲಿ ನಾಮಪತ್ರ ಸಲ್ಲಿಸಿದ್ದಾರೆ. ಇವರನ್ನು ಬಿಟ್ಟು ಉಳಿದವರಾರು ಉಮೇದುವಾರಿಕೆ ಸಲ್ಲಿಸಿಲ್ಲ. ನಾಮಪತ್ರ ಸಲ್ಲಿಕೆಗೆ ಬುಧವಾರ ಕೊನೆಯ ದಿನವಾಗಿದ್ದು, ಬೇರಾರೂ ಸಲ್ಲಿಸದ ಕಾರಣ ನೌಕರರು ಇವರೇ ಅವಿರೋಧ ಆಯ್ಕೆಯೆಂದು ಹರ್ಷ ಪಟ್ಟರು. ಬಣ್ಣ ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು.
ನಾಗರಾಜ ಜುಮ್ಮನ್ನವರ ಈಗಾಗಲೇ ಎರಡು ಅವಧಿಗೆ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಅವಧಿಯಲ್ಲಿ ರಾಜ್ಯ ಉಪಾಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ. ಇದೀಗ ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಮೂರನೇ ಅವಧಿಗೆ ಅವಿರೋಧ ಆಯ್ಕೆ ಆದಂತಾಗಲಿದೆ. ಚುನಾವಣಾ ನಿಯಮ ಪ್ರಕಾರ ಘೋಷಣೆ ಬಾಕಿ ಉಳಿದಿದೆ. ನ.28ರಂದು ನಾಮಪತ್ರ ಪರಿಶೀಲನೆ ಹಾಗೂ 29ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಿದೆ.