ವಿಕಲಚೇತನರಲ್ಲಿದೆ ವಿಶಿಷ್ಟ ಶಕ್ತಿ

district koppal govt employee sports handycap
Published on

ಕೊಪ್ಪಳ: ವಿಕಲಚೇತನರಲ್ಲಿ ವಿಶೇಷ ಶಕ್ತಿ ಅಡಗಿರುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನವರ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಕಲಚೇತನ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲರಲ್ಲೂ ಪ್ರತಿಭೆ ಇರಲಿದೆ. ಅದನ್ನು ಹೊರ ಹಾಕಲು ಅವಕಾಶ ಮಾಡಿಕೊಡಬೇಕು. ಅವರಿಗಾಗಿಯೇ ಪ್ರತ್ಯೇಕ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಕಳೆದ ಆರು ವರ್ಷದಿಂದ ನಿರಂತರವಾಗಿ ನಮ್ಮ ಸಂ ಈ ಕೆಲಸ ಮಾಡುತ್ತಿದೆ. ಕೊಪ್ಪಳದಲ್ಲಿಯೇ ಪ್ರಥಮ ಬಾರಿಗೆ ವಿಕಲಚೇತನ ನೌಕರರಿಗೆ ಪ್ರತ್ಯೇಕ ಕ್ರೀಡಾಕೂಟ ಏರ್ಪಡಿಸಿದ್ದು. ರಾಜ್ಯಮಟ್ಟದಲ್ಲಿಯೂ ಪ್ರತ್ಯೇಕ ಸ್ಪರ್ಧೆ ಆಯೋಜನೆಗೆ ಕ್ರಮವಹಿಸಲಾಗುವುದೆಂದರು.

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್​ ಜಾಬಗೌಡರ ಮಾತನಾಡಿ, ಕ್ರೀಡಾ ಚಟುವಟಿಕೆಗಳಿಗೆ ಇಲಾಖೆ ಸದಾ ಸಹಕಾರ ನೀಡಲಿದೆ. ಪ್ರತಿಭೆ ಗುರುತಿಸುವ ಕೆಲಸ ಎಲ್ಲರೂ ಮಾಡಬೇಕಿದೆ. ವಿಶೇಷ ಚೇತನರಿಗಾಗಿಯೇ ಪ್ರತ್ಯೇಕ ಕ್ರೀಡಾಕೂಟ ಆಯೋಜಿಸಿದ್ದು ಶ್ಲಾನೀಯ ಎಂದರು.

ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಮಾತನಾಡಿ, ನಮ್ಮ ಬೇಡಿಕೆ ಹಿನ್ನೆಲೆಯಲ್ಲಿ ವಿಜಯಪುರ ಮತ್ತು ಬಾಗಲಕೋಟೆಯಲ್ಲೂ ವಿಶೇಷ ಚೇತನರಿಗೆ ಪ್ರತ್ಯೇಕ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಉಳಿದ ಜಿಲ್ಲೆಯಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಆಯೋಜಿಸಬೇಕೆಂದು ಮನವಿ ಮಾಡಿದರು.

ನೌಕರರ ಸಂದ ಪದಾಧಿಕಾರಿಗಳಾದ ಜಯತೀರ್ತ ದೇಸಾಯಿ, ಆಸೀಫ್​ ಅಲಿ, ನಾಗರಾಜ ಕುಷ್ಟಗಿ, ಶಂಶಾದ ಬೇಗಂ, ಹನುಮಂತಪ್ಪ ನಾಯಕ, ಅಂದಪ್ಪ ಬೋಳರೆಡ್ಡಿ, ಅಂದಪ್ಪ ಇದ್ಲಿ, ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಬಾಳಪ್ಪ ಕಾಳೆ, ನಾಗರಾಜನಾಯಕ ಡೊಳ್ಳಿನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net