ಅಧ್ಯಯನ ವಿಸ್ತಾರದಿಂದ ಕೌಶಲಗಳ ಕಲಿಕೆ

district koppal govt degree collage workshop
Published on

ಕೊಪ್ಪಳ: ಸಾಧಿಸುವವರಿಗೆ ಸಮಸ್ಯೆಗಳು ಅನೇಕ. ಕಲಿಕೆಗೆ ಕೊನೆ ಇಲ್ಲ. ಹೆಚ್ಚೆಚ್ಚು ಅಧ್ಯಯನ ಮಾಡಿದಂತೆ ಕೌಶಗಳ ಕಲಿಕೆ ಹೆಚ್ಚಾಗಲಿದೆ ಎಂದು ಸಹಾಯಕ ಪ್ರಾಧ್ಯಾಪಕ ಶಂಕ್ರಯ್ಯ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧುವಾರದ ಹಮ್ಮಿಕೊಂಡಿದ್ದ ಪ್ರೇರಣಾ ಮೆಂಟರ್​ ಶಿಪ್​ ಕಾರ್ಯಗಾರದಲ್ಲಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇರಲಿದೆ. ನಮ್ಮಲ್ಲಿ ಕೀಳರಿಮೆ ಇರಬಾರದು. ಚನ್ನಾಗಿ ಓದಿ ಬದುಕು ಕಟ್ಟಿಕೊಳ್ಳಬೇಕು. ಆತ್ಮ ವಿಶ್ವಾಸ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಲ್ಲಿ ತಾಳ್ಮೆ ಮತ್ತು ಇಚ್ಚಾ ಶಕ್ತಿ ಅವಶ್ಯ. ಆಗ ಮಾತ್ರ ಉದ್ಯೋಗ ಪಡೆಯಬಹುದು. ನಿರಂತರ ಪ್ರಯತ್ನ ಮತ್ತು ಛಲ ಇರಲಿ ಎಂದರು.

ಪ್ರೇರಣಾ ಟಕ ಸಂಚಾಲಕ ವಿಠೊಬ ಎಸ್​. ಮಾತನಾಡಿ, ಪ್ರೇರಣಾ ಮೆಂಟರ್​ಶಿಪ್​ ಮೂಲಕ ಸಂವಹನ ಕಲೆ, ಸಂಶೋಧನೆ, ಉದ್ಯೋಗ ಕೌಶಲ ಕಲಿಯಬಹುದು. ಕಾರ್ಯಕ್ರಮ ಮೂಲಕ ವಿದ್ಯಾರ್ಥಿಗಳ ಕುಂದುಕೊರತೆ ಗುರುತಿಸಿ ಪರಿಹರಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಎದುರಿಸುವುದು ಹೇಗೆ ? ಎಂಬ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ಸ್ವತಂತ್ರ ಬದಕನ್ನು ಕಟ್ಟಿಕೊಳ್ಳಲು ಇಂಥ ಕಾರ್ಯಕ್ರಮಗಳು ಉಪಯುಕ್ತ ಎಂದು ತಿಳಿಸಿದರು.

ಪ್ರಾಚಾರ್ಯ ಡಾ.ಗಣಪತಿ ಕೆ.ಲಮಾಣಿ ಮಾತನಾಡಿ, ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು. ಪದವಿ ಮುಗಿದ ನಂತರ ಏನು ಓದಬೇಕು, ಯಾವ ಪರೀಕ್ಷೆ ಬರೆಯಬೇಕು ಎಂಬುದನ್ನು ಈಗನಿಂದಲೇ ಅರಿಯಿರಿ ಎಂದರು.

ಶರಣಯ್ಯ ಅಬ್ಬಿಗೇರಿ ಮಠ ಸ್ಪರ್ಧಾತ್ಮಕ ಪರೀೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಉಪನ್ಯಾಸಕರಾದ ಡಾ.ಅಶೋಕ ಕುಮಾರ್​, ಡಾ.ಪ್ರದಿಪ್​ ಕುಮಾರ, ಡಾ.ಮಲ್ಲಿಕಾರ್ಜುನ, ಡಾ.ನರಸಿಂಹ, ಸುಮಿತ್ರಾ, ಉಮಾದೇವಿ ಮತ್ತು ಉಮೇಶ್​ ಕಾತರಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net