ಹುಲಿಗೆಮ್ಮ ದರ್ಶನ ಪಡೆದ ವಿಜಯಶಂಕರ

district koppal governor vijayashankar visit huligemma devi temple
Published on

ಕೊಪ್ಪಳ: ಮೇಘಾಲಯ ರಾಜ್ಯಪಾಲ ಸಿ.ಎಚ್​.ವಿಜಯಶಂಕರ ಅವರು ಭಾನುವಾರ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು.

ಎರಡು ದಿನ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದು, ಬೆಳಗ್ಗೆಯೇ ಹುಲಿಗಿಗೆ ಆಗಮಿಸಿದರು. ದೇವಾಲಯ ಸಿಬ್ಬಂದಿ ರಾಜ್ಯಪಾಲರನ್ನು ಸ್ವಾಗತಿಸಿದರು. ಬಳಿಕ ದೇವಿ ದರ್ಶನ ಪಡೆದರು. ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿ ನಮಿಸಿದರು. ನಂತರ ದೇವಾಲಯ ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆದರು. ಸಿಇಒ ಪ್ರಕಾಶರಾವ್​ ಎಂ.ಎಚ್​. ಪ್ರಾಧಿಕಾರ ರಚನೆ, ಮಾಸ್ಟರ್​ ಪ್ಲಾ$್ಯನ್​, ಅಭಿವೃದ್ಧಿ ಕಾರ್ಯಗಳು, ಭಕ್ತರು ಭೇಟಿ ನೀಡುವ ಸಂಖ್ಯೆ, ಕಲ್ಪಿಸಿದ ಸೌಲಭ್ಯಗಳ ಬಗ್ಗೆ ವಿವರಿಸಿದರು.

ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​, ದೇವಾಲಯ ಸಿಇಒ ಪ್ರಕಾಶರಾವ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net