

ಕೊಪ್ಪಳ: ಸಕ್ಕರೆ ಕಾರ್ಖಾನೆ ಆರಂಭಿಸದಂತೆ ಒತ್ತಾಯಿಸಿ ತಾಲೂಕಿನ ಮುದ್ದಾಬಳ್ಳಿ, ಗೊಂಡಬಾಳ ಗ್ರಾಮಸ್ಥರು ಗೊಂಡಬಾಳ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಸಕ್ಕರೆ ಕಾರ್ಖಾನೆ ಬೇಡವೆಂದು ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಹೋರಾಟ ಮಾಡಿದರೂ ಬೆಲೆ ನೀಡುತ್ತಿಲ್ಲ. ಗ್ರಾಪಂ ನಿರಪೇಕ್ಷಣಾ ಪತ್ರ ನೀಡಲು ಗುಪ್ತ ಸಭೆ ನಡೆಸಿದೆ. ಇದು ಖಂಡನೀಯ. ಜನರ ಹಿತ ಕಾಯುವ ಬದಲು ಮಾರಕ ರ್ನಿಣಯ ಕೈಗೊಂಡಿರುವುದನ್ನು ಒಪು$್ಪವುದಿಲ್ಲ ಎಂದು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದರು. ಬೈಕ್ ರ್ಯಾಲಿ ನಡೆಸಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿದರು. ಡಿಸಿ ಆಗಮಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಪಟ್ಟು ಹಿಡಿದರು. ಬೆಳಗ್ಗೆಯಿಂದ ಸಂಜೆ 5 ಗಂಟೆವರೆಗೆ ಗ್ರಾಪಂ ಆವರಣದಲ್ಲೇ ಧರಣಿ ನಡೆಸಿದರು.
ಪಿಡಿಒ ವಿಜಯಲಕ್ಷಿ$್ಮ ಮಾತನಾಡಿ, ನಾವಿನ್ನೂ ಕಂಪನಿಗೆ ನಿರಪೇಕ್ಷಣಾ ಪತ್ರ ನೀಡಿಲ್ಲ. ಸಭೆಯಲ್ಲಿ ಠರಾವು ಪಾಸ್ ಮಾಡಿದ್ದೇವೆ ಎಂದರು. ಲಿಖಿತ ಹೇಳಿಕೆ ನೀಡಲು ಪ್ರತಿಭಟನಕಾರರು ಒತ್ತಾಯಿಸಿದರು. ಪರಿಸ್ಥಿತಿ ನಿಭಾಯಿಸಲು ಗ್ರಾಮೀಣಠಾಣೆ ಪಿಎಸ್ಐ ವಿರೇಶ ಯತ್ನಿಸಿದರು. ಕೊನೆಗೆ ವಿಶೇಷ ಗ್ರಾಮಸಭೆ ಕರೆದು ರ್ನಿಣಯ ಕೈಗೊಳ್ಳುವುದಾಗಿ ಗ್ರಾಪಂ ಅಧಿಕಾರಿಗಳು ತಿಳಿಸಿದ ಬಳಿಕ ಪ್ರತಿಭಟನೆ ಕೈ ಬಿಟ್ಟರು.
ಪ್ರಮುಖರಾದ ಕೆ.ಎಫ್. ಮುದ್ದಾಬಳ್ಳಿ, ದೇವೇಂದ್ರಸ್ವಾಮಿ ಏಕದಂಡಗಿಮಠ, ಗವಿಸಿದ್ದನಗೌಡ ಪಾಟೀಲ್, ರಾಜೀವರಡ್ಡಿ ಮಾದಿನೂರು, ಮಲ್ಲಪ್ಪ ಕುಕನೂರು, ಮಹೇಶ ಹಿರೇಮಠ, ಮಲ್ಲಿಕಾರ್ಜುನ ಕಮ್ಮಾರ, ಸುರೇಂದ್ರಗೌಡ ಪಾಟೀಲ್, ಈರಣ್ಣ ಮಾಳೆಕೊಪ್ಪ, ಶರಣಪ್ಪ ಸಜ್ಜನ್ ಇತರರಿದ್ದರು.