ಸೇವೆಗೆ ಭಕ್ತಾಧಿಗಳಲ್ಲಿ ಮನವಿ

Published on

ಕೊಪ್ಪಳ: ಗವಿಮಠ ಜಾತ್ರೆಯಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ನೋಂದಣಿ ಮಾಡಿಸಿಕೊಳ್ಳುವಂತೆ ಗವಿಮಠ ಮನವಿ ಮಾಡಿದೆ.

ಜಾತ್ರಾ ಮಹೋತ್ಸವ ನಾಡಿನ ಜನರ ಭಕ್ತಿಯ ನಿತ್ಯೋತ್ಸವ. ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ ಪ್ರತಿವರ್ಷ ವಿನೂತನ ಕಾರ್ಯಯೋಜನೆ ರೂಪಿಸಿ ಅದನ್ನು ಅನುಷ್ಠಾನಗೂಳಿಸುತ್ತಿದೆ. ಜಾತ್ರಾ ಮಹೋತ್ಸವದಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಗಣನೀಯವಾಗುತ್ತಿದೆ. ಸ್ವ-ಇಚ್ಛೆಯಿಂದ ಸೇವೆ ಸಲ್ಲಿಸುವ ಆಸಕ್ತ ಭಕ್ತಗಣ ನೋಂದಣಿ ಮಾಡಿಕೊಳ್ಳಬಹುದು. ಸ್ವಚ್ಛತೆ, ಶಿಸ್ತು ಕರ್ತವ್ಯ ಹಾಗೂ ಮಹಾ ದಾಸೋಹ ಸೇವೆಯಲ್ಲಿ ತೊಡಗಬಹುದು. ಆಸಕ್ತರು 9844634990 ಸಂಖ್ಯೆಗೆ ವಾಟ್ಸಾಪ್​ ಮೂಲಕ ತಮಮ್​ ವಿವರಗಳನ್ನು 2025ರ ಜನೆವರಿ 5ರೊಳಗೆ ಸಲ್ಲಿಸುವಂತೆ ಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net