ಕೊಪಣಾಧೀಶನಿಗೆ ಗಂಗಾರತಿ ಮೆರಗು

Gavisiddeswara jaatra koppal gavimath teppotsava gangarathi devootees visit
Published on
  • ತೆಪ್ಪದಲ್ಲಿ ತೇಲಿ ಬಂದ ಗವಿಸಿದ್ಧೇಶ್ವರ
  • ಸಡಗರ-ಸಂಭ್ರಮದಲ್ಲಿ ಮಿಂದ ಭಕ್ತರು

ಕೊಪ್ಪಳ: ಕೊಪಣಗಿರಿ ಅಧಿಪತಿ ಗವಿಸಿದ್ಧೇಶ್ವರ ಜಾತ್ರೋತ್ಸವ ಜಿಲ್ಲಾದ್ಯಂತ ಸಡಗರ-ಸಂಭ್ರಮ ತುಂಬುವಂತೆ ಮಾಡಿದೆ. ಬುಧವಾರ ಮಠದ ಕೆರೆಯಂಗಳದಲ್ಲಿ ಉತ್ಸವ ಮೂರ್ತಿ ಹೊತ್ತ ತೆಪ್ಪೋತ್ಸವ ವೈಭವದಿಂದ ಜರುಗಿತು. ವಿಶೇಷವಾಗಿ ಜರುಗಿದ ಗಂಗಾರತಿ ಬೆಳಕು ಭಕ್ತರ ಮನದಂಗಳ ತುಂಬಿ ಭಕ್ತಿ ಮೆರೆಯುವಂತೆ ಮಾಡಿತು. ಸಾವಿರಾರು ಜನರು ಈ ಸುಂದರ ಕ್ಷಣಕ್ಕೆ ಸಾಯಾದರು.

ಬೆಳಗ್ಗೆ ಕಾಯಕ ದೇವೋಭವ ಹೆಸರಿನಲ್ಲಿ ಸ್ವಯಂ ಉದ್ಯೋಗ ಜಾಗೃತಿ ಮೂಡಿಸಲಾಯಿತು. ಸಂಜೆ ಮಠದ ಕೆರೆಯಂಗಳದಲ್ಲಿ ಗಂಗಾರತಿ ಮೆರಗು ನೋಡಗರನ್ನು ಮಂತ್ರಮುಗ್ದರನ್ನಾಗಿಸಿತು. ವಾರಣಾಸಿಯಿಂದ ತರಿಸಿ ಆರತಿಯಿಂದ ಈ ಬಾರಿ ಗಂಗಾರತಿ ಸಲ್ಲಸಿದ್ದು ವಿಶೇಷವಾಗಿ ಕಂಡುಬಂತು.

ನಂತರ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ತೆಪ್ಪದಲ್ಲಿ ಗವಿಸಿದ್ದೇಶನ ಉತಸವ ಮೂರ್ತಿ ಕುಳ್ಳಿರಿಸಲಾಯಿತು.ಡಯೇಟ್​ ನಿವೃತ್ತ ಪ್ರಾಧ್ಯಾಪಕ ಪಂಚಾಕ್ಷರಯ್ಯ ನೂರೊಂದಯ್ಯನಮಠ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು. ವಿವಿಧ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ತೆಪ್ಪವು ಚಂದ್ರನ ಬೆಳಕನ್ನು ಮಂಕಾಗಿಸಿದಂತೆ ಕಂಡುಬಂತು.

ಕೆರೆಯಲ್ಲಿ ಅಂಬಿಗರು ನಿಧಾನವಾಗಿ ತೆಪ್ಪ ಸಾಗಿಸುತ್ತಲೇ ಭಕ್ತರು ಜಯಘೋಷ ಕೂಗಿ ನಮಿಸಿದರು. ಒಂದು ಸುತ್ತು ಸಾಗಿದ ತೆಪ್ಪ ಕೆರೆ ದಡದಲ್ಲಿ ನೆರೆದಿದ್ದ ಸಾವಿರಾರು ಭಕ್ತರಿಗೆ ದರ್ಶನ ನೀಡಿತು. "ಪಾಹಿಮಾಂ ಗವಿಸಿದ್ದ ಪಾಹಿಮಾಂ' ಎಂಬ ಹಾಡಿಗೆ ದನಿಗೂಡಿಸಿ ಗವಿಸಿದ್ದಪ್ಪಜ್ಜನ ನಾಮ ಸ್ಮರಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net