ಅರಣ್ಯ ರಕ್ಷಣೆ ಯುವಕರ ಹೊಣೆ

district koppal gavisiddeswara collage forest dfo kavya chaturvedhi
Published on

ಕೊಪ್ಪಳ: ಹೆಚ್ಚುತ್ತಿರುವ ಜಾಗತಿಕ ತಾಪಮಾನ ತಡೆಗಟ್ಟಲು ಅರಣ್ಯ ರಕ್ಷಣೆ ಮಾಡುವ ಅಗತ್ಯವಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ಕಾವ್ಯಾ ಚತುರ್ವೇದಿ ಹೇಳಿದರು.

ನಗರದ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಸಸ್ಯ ವಿಜ್ಞಾನ ಕ್ಷೇತ್ರದಲ್ಲಿ ಸವಾಲುಗಳು ಮತ್ತು ಅವಕಾಶಗಳು ವಿಷಯ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಯುವಕರ ಅರಣ್ಯ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಸಸ್ಯಶಾಸ್ತ್ರ ಅಧ್ಯಯನ ಮಾಡುವವರಿಗೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗವಕಾಶಗಳಿವೆ. ಅರಣ್ಯ ಇದ್ದರೆ ನಾವೆಲ್ಲ ಉತ್ತಮವಾಗಿ ಜೀವನ ಸಾಗಿಸಬಹುದು. ಅರಣ್ಯ ನಾಶದಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಪರಿಣಾಮ ಅನೇಕ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತವೆ. ಇದೆಲ್ಲವನ್ನು ತಡೆಗಟ್ಟಲು ಅರಣ್ಯ ಉಳಿಸಬೇಕಿದೆ ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಡಾ.ಉಮಾರೆಡ್ಡಿ ಮಾತನಾಡಿ, ಹವಾಮಾನ ಬದಲಾವಣೆ, ಆಹಾರ ಭದ್ರತೆ ಮತ್ತು ಸುಸ್ಥಿರ ಕೃಷಿ ಜಾಗತಿಕ ಸವಾಲುಗಳನ್ನು ಪರಿಹರಿಸುವಲ್ಲಿ ಸಸ್ಯ ಸಂಶೋಧನೆಯ ಹೆಚ್ಚುತ್ತಿರುವ ಮಹತ್ವ ತಿಳಿಸಿದರು. ಸಸ್ಯ ಸಂಶೋಧನೆಯಲ್ಲಿನ ಪ್ರಗತಿಗಳು, ಬೆಳೆ ಇಳುವರಿ ಹೆಚ್ಚಿಸುವಲ್ಲಿ ಮತ್ತು ಕ್ಯಾನ್ಸರ್​ನಂಥ ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ನಿರ್ಣಾಯಕವಾಗಿರುವ ಸಂಶೋಧನೆ ಬಗ್ಗೆ ತಿಳಿಸಿದರು.

ಡಾ.ಅಜಯ್​ ಕುಮಾರ್​ ಓಲೆ, ಪ್ರಾಚಾರ್ಯ ಡಾ.ಚನ್ನಬಸವ, ಡಾ.ಸುಂದರ ಎಸ್​.ಮೇಟಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರಾದ ವಿನೋದ ಮುದಿಬಸನಗೌಡರ, ಪ್ರವಿಣ ಹಾದಿಮನಿ, ವೆಂಕಟೇಶ ನಾಯ್ಕ, ಮಂಜುನಾಥ ಗಾಳಿ, ಡಾ. ಕರಿಬಸವೇಶ್ವರ ಬಿ., ಡಾ. ಅರುಣಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net