ಗವಿಸಿದ್ದ ಬಳ್ಳಾರಿ ಸಾಹಿತ್ಯೋತ್ಸವ ನ.24ರಂದು

Published on

ಕೊಪ್ಪಳ: ಕವಿ ಗವಿಸಿದ್ಧ ಎನ್​. ಬಳ್ಳಾರಿ ಸ್ಮರಣೆಯ 6 ನೇ ಸಾಹಿತ್ಯೋತ್ಸವ ನ.24ರಂದು ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ. ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ.ರವಿ ಉದ್ಘಾಟಿಸಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅತಿಥಿಯಾಗಿ ಭಾಗಿಯಾಗಲಿದ್ದಾರೆಂದು ಕಾರ್ಯಕ್ರಮ ಸಂಚಾಲಕ ಮಹೇಶ ಬಳ್ಳಾರಿ ತಿಳಿಸಿದ್ದಾರೆ.

ಬೆಳಗ್ಗೆ 10.15ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಗವಿಸಿದ್ಧ ಎನ್​. ಬಳ್ಳಾರಿ ಬದುಕು ಮತ್ತು ಕಾವ್ಯ ಕುರಿತು ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಲಿದ್ದಾರೆ. ಅತಿಥಿಗಳಾಗಿ ಬಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ಹಿರಿಯ ಸಾಹಿತಿಗಳಾದ ಎಚ್​.ಎಸ್​. ಪಾಟೀಲ, ಅಲ್ಲಮಪ್ರಭು ಬೆಟ್ಟದೂರು ಉಪಸ್ಥಿತರಿರುವರು.

ಚನ್ನಪ್ಪ ಅಂಗಡಿಯವರ "ಇನ್ನು ಕೊಟ್ಟೆನಾದೊಡೆ', ನಾಗೇಶ್​ ನಾಯಕ ಅವರ "ಮನುಷ್ಯರಿಲ್ಲದ ನೆಲ', ನಾಗಭೂಷಣ ಅರಳಿ ಅವರ "ನೂರೆಂಟು ಹೆಜ್ಜೆಗಳು' ಕೃತಿಗಳು ಬಿಡುಗಡೆಯಾಗಲಿವೆ. ಗವಿಸಿದ್ಧ ಎನ್​.ಬಳ್ಳಾರಿ ಕಾವ್ಯ ಪ್ರಶಸ್ತಿ ಪ್ರದಾನ, ವಿವಿಧ ಗಣ್ಯರಿಗೆ ಸನ್ಮಾನ ಇರಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net