

ಕೊಪ್ಪಳ: ಬಿಎಸ್ಪಿಎಲ್ ಸೇರಿ ಹೊಸ ಕಾರ್ಖಾನೆಗಳ ಆರಂಭ ವಿರೋಧಿಸಿ ಕೊಪ್ಪಳ ತಾಲೂಕು ಹಿತರಕ್ಷಣಾ ವೇದಿಕೆ ಸೋಮವಾರ ಕರೆ ನೀಡಿದ್ದ ಬಂದ್ ಯಶಸ್ವಿಯಾಯಿತು. ಜನರು ಸ್ವಯಂ ಪ್ರೇರಿತರಾಗಿ ಅಂಗಡಿ&ಮುಂಗಟ್ಟೆಗಳನ್ನು ಬಂದ್ ಮಾಡುವ ಮೂಲಕ ಹೋರಾಟ ಬೆಂಬಲಿಸಿದರು.
ಗವಿಮಠದಿಂದ ಆರಂಭವಾದ ಜಾಥಾ ಗಡಿಯಾರ ಕಂಬ ವೃತ್ತ, ಜವಾಹರ ರಸ್ತೆ, ಅಶೋಕ ವೃತ್ತ ಮಾರ್ಗವಾಗಿ ತಾಲೂಕು ಕ್ರೀಡಾಂಗಣ ತಲುಪಿತು. 20&25 ಸಾವಿರ ಜನರು ಭಾಗಿಯಾದರು. ಕವಿಗಳು ಕವನ ವಾಚಿಸಿದರೆ, ವಕೀಲರು ಕಲಾಪದಿಂದ ದೂರ ಉಳಿದರು. ಜನರಿಗೆ ಬೆಳಗ್ಗೆ ಪ್ರಸಾದ, ಕುಡಿವ ನೀರು, ಮಜ್ಜಿಗೆ, ಪಾನಕ, ಮಧ್ಯಾಹ್ನ ಊಟ ವ್ಯವಸ್ಥೆ ಮಾಡಲಾಯಿತು. ಹಿರೇ ಬಗನಾಳ ರೈತರು ಟ್ರ್ಯಾಕ್ಟರ್ನಲ್ಲಿ ಧೂಳಿನಿಂದ ಆವೃತವಾದ ಬೆಳೆಗಳು ಹಾಗೂ ಆಕ್ಸಿಜನ್ ಮಾಸ್ಕ್ ಹಾಕಿ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.