ಕಣ್ಣೀರು ಹಾಕಿದ ಗವಿಶ್ರೀಗಳು

district koppal gavishree gavimath protest mspl
Published on

ಕೊಪ್ಪಳ: ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಗವಿಶ್ರೀಗಳು ಭಾವುಕರಾಗಿ ಕಣ್ಣೀರು ಹಾಕಿದರು.

ಕಾರ್ಖಾನೆಗಳಿಂದ ಕೊಪ್ಪಳ ತಾಲೂಕಿನ ಬಗನಾಳ, ಕಾಸನಕಂಡಿ, ಹಾಲವರ್ತಿ ಇನ್ನಿತರ ಗ್ರಾಮಗಳಲ್ಲಿ ಜನರು ಅನುಭವಿಸುವ ವಿಡಿಯೋ ತುಣುಕು ಪ್ರದರ್ಶನ ವೇಳೆ ಹಾಗೂ ತಮ್ಮ ಭಾಷಣದಲ್ಲಿ ಭಾವುಕರಾಗಿ ಕಣ್ಣೀರಾದರು. ವಿಡಿಯೋದಲ್ಲಿ ಮಕ್ಕಳು, ಮಹಿಳೆ, ರೈತರು ಧೂಳಿನಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಮನಮಿಡಿಯುವಂತೆ ಮಾತನಾಡಿದ್ದಾರೆ. ಪ್ರತಿಭಟನಾ ಸಭೆಯಲ್ಲಿ ಭಾಗಿಯಾದವರಿಗೆ ವಿಡಿಯೋ ಪ್ರದರ್ಶಿಸಿದ್ದು, ವೀಕ್ಷಿಸುವಾಗ ಗವಿಶ್ರೀಗಳು ಕಣ್ಣೀರು ಹಾಕಿದ್ದು ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net