ಜನಪ್ರತಿನಿಧಿಗಳಿಗೆ ತರಾಟೆ ತೆಗೆದುಕೊಂಡ ಗವಿಶ್ರೀ

district koppal gavishree gavimath protest mspl
Published on

ಕೊಪ್ಪಳ: ಕಾರ್ಖಾನೆ ವಿಷಯವಾಗಿ ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಗವಿಶ್ರೀಗಳು ಜಿಲ್ಲೆಯ ಜನಪ್ರತಿನಿಧಿಗಳನ್ನು ತರಾಟೆ ತೆಗೆದುಕೊಂಡರು.

ತಂಗಡಗಿ ಗೆದ್ದಾಗೊಮ್ಮೆ ಸಚಿವರು. ಬಸವರಾಜ ರಾಯರಡ್ಡಿ ಏಳು ಬಾರಿ ಶಾಸಕರಾಗಿ, ಸಿಎಂ ಆರ್ಥಿಕ ಸಲಹೆಗಾರರಾಗಿದ್ದಾರೆ. ಕೊಪ್ಪಳ ಶಾಸಕ ಹಿಟ್ನಾಳ ಸೋಲನ್ನೇ ಕಂಡಿಲ್ಲ. ಸಂಸದ ರಾಜಶೇಖರ ಹಿಟ್ನಾಳ ಸಿಎಂ ಆಪ್ತರು. ತಾಲೂಕಿನಲ್ಲಿ ಒಬ್ಬ ಅಧಿಕಾರಿ ಬದಲಾಗಬೇಕಾದರೆ ನಿಮ್ಮ ಅನುಮತಿ ಪತ್ರ ಬೇಕು. ಆದರೆ, ಇಷ್ಟ ದೊಡ್ಡ ಕಾರ್ಖಾನೆ ಕೊಪ್ಪಳಕ್ಕೆ ಹೊಂದಿಕೊಂಡು ನಿರ್ಮಾಣವಾಗುತ್ತಿದ್ದರೂ ಸುಮ್ಮನೆ ಕೂತಿದ್ದೀರಿ.

ನೀವು ಏನು ಮಾಡುವಿರೊ ಗೊತ್ತಿಲ್ಲ. ಕಾರ್ಖಾನೆ ಸ್ಥಾಪನೆ ರದ್ದಾದ ಆದೇಶ ಪಡೆದು ಕೊಪ್ಪಳಕ್ಕೆ ಬರಬೇಕು. ನಾವ್ಯಾಕೆ ಹೋರಾಟ ಮಾಡಿ ಕೋರ್ಟ್​, ದೆಹಲಿಗೆ ಹೋಗಬೇಕು ? ಬಂಡವಾಳಶಾಹಿ, ಧನಿಕರ ಪರ ಇರಬೇಡಿ. ಜನರ ಪರ ಇರಿ. ಜಿಲ್ಲೆ ಅಭಿವೃದ್ಧಿಗೆ ಏನು ಬೇಕೆಂಬ ಬಗ್ಗೆ ಜನಪ್ರತಿನಿಧಿಗಳಿಗೆ ದೂರದೃಷ್ಟಿ ಇರಬೇಕು. ನಮ್ಮೂರನ್ನು ಜಪಾನ್​ ಮಾಡಬೇಡಿ. ಜನರನ್ನು ಜೋಪಾನವಾಗಿ ನೋಡಿಕೊಳ್ಳಿ ಎಂದು ಗವಿಶ್ರೀಗಳು ಜನಪ್ರತಿನಿಧಿಗಳನ್ನು ತರಾಟೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net