ಶಾಂತಿಯುತ ಪ್ರತಿಭಟನೆಗೆ ಗವಿಶ್ರೀಗಳ ಕರೆ

district koppal gavishree gavimath protest
Published on

ಕೊಪ್ಪಳ: ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆಯಿಂದ ೆ.24ರಂದು ಕರೆ ನೀಡಿರುವ ಬಂದ್​ನಲ್ಲಿ ಸಾಮೂಹಿಕ ನಾಯಕತ್ವದಡಿ ಎಲ್ಲರೂ ಶಾಂತಿಯಿಂದ ಭಾಗವಹಿಸಲು ಗವಿಸಿದ್ಧೇಶ್ವರ ಸ್ವಾಮೀಜಿ ಕರೆ ನೀಡಿದ್ದಾರೆ. ಈ ಬಗ್ಗೆ ಶನಿವಾರ ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಂಚಾಲಕರು ಜನರಿಗೆ ಮನವರಿಕೆ ಮಾಡಿದರು.

ನಗರದ ಗವಿಮಠದಿಂದ ಬೆಳಗ್ಗೆ 9 ಗಂಟೆಗೆ ಜಾಥಾ ಆರಂಭವಾಗಲಿದೆ. ಪ್ರಸಾದ ವ್ಯವಸ್ಥೆಯೂ ಇರಲಿದೆ. ಗಡಿಯಾರ ಕಂಬ ವೃತ್ತ, ಜವಾಹರ್​ ರಸ್ತೆ, ಅಶೋಕ ವೃತ್ತ ಮಾರ್ಗವಾಗಿ ತಾಲೂಕು ಕ್ರೀಡಾಂಗಣ ತಲುಪಲಿದೆ. ಕಾರ್ಖಾನೆಗಳನ್ನು ಕಳಿಸಿ, ಕೊಪ್ಪಳ ನಾಡನ್ನು ಉಳಿಸಿ ಎಂಬ ಘೋಷವಾಕ್ಯ ಮಾತ್ರ ಕೂಗಬೇಕು. ಯಾವ ಪಕ್ಷ, ವ್ಯಕ್ತಿ ವಿರುದ್ಧ ಘೋಷಣೆಗಳಿರಬಾರದು. ಜಾಥಾದಲ್ಲಿ ಭಾಗಿಯಾಗುವವರಿಗೆ ಕುಡಿವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗುವುದು. ತಾಲೂಕು ಕ್ರೀಡಾಂಗಣದಲ್ಲಿ ಬೃಹತ್​ ವೇದಿಕೆ ಇರಲಿದೆ.

ಸ್ವಾಮೀಜಿಗಳು, ಜನಪ್ರತಿನಿಧಿಗಳು, ಗಣ್ಯರು ಒಳಗೊಂಡು ಎಲ್ಲರಿಗೂ ಕೂಡಲು ಸ್ಥಳಾವಕಾಶ, ನೆರಳಿನ ವ್ಯವಸ್ಥೆ ಕಲ್ಪಿಸಲಾಗುವುದು. ಮಧ್ಯಾಹ್ನ ಕ್ರೀಡಾಂಗಣದಲ್ಲೇ ಊಟದ ವ್ಯವಸ್ಥೆ ಇರಲಿದೆ. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಬೇಡಿಕೆ ಮನವಿ ಸಲ್ಲಿಸಲಾಗುವುದು. ಎಲ್ಲರೂ ಶಾಂತಿಯುತ ಬಂದ್​ಗೆ ಸಹಕರಿಸುವಂತೆ ಶ್ರೀಗಳು ತಿಳಿಸಿದ್ದಾಗಿ ವಿವರಿಸಿದರು.

ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​, ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಹಿರಿಯ ವಕೀಲೆ ಸಂಧ್ಯಾ ಮಾದಿನೂರು ಇತರರ ಗಣ್ಯರು ಅಭಿಪ್ರಾಯ ಹಂಚಿಕೊಂಡರು.

ಜನಪ್ರತಿನಿಧಿಗಳು, ವಿವಿಧ ಸಂಟನೆಗಳ ಪ್ರಮುಖರು, ಮಹಿಳಾ ಸಂಟನೆಗಳ ಪ್ರಮುಖರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net