

ಕೊಪ್ಪಳ: ಗವಿ ನಾಯಕ ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಸೋಲಿಡಾರಿಟಿ ಯೂಥ್ ಮೂವ್ಮೆಂಟ್ ಕರ್ನಾಟಕದ ಜಿಲ್ಲಾ ಪದಾಧಿಕಾರಿಗಳು ಗುರುವಾರ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿಗೆ ಮನವಿ ಸಲ್ಲಿಸಿದರು.
ಪ್ರೀತಿ ವಿಷಯವಾಗಿ ಗವಿ ನಾಯಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಟನೆಯಿಂದ ಎಲ್ಲರೂ ಆತಂಕಗೊಳ್ಳುವಂತಾಗಿದೆ. ಆರೋಪಿಗಳನ್ನು ಬಂಧಿಸಿರುವುದು ಉತ್ತಮ ಕೆಲಸ. ಕೊಲೆ ಮಾಡಿದವರಿಗೆ ಸೂಕ್ತ ಶಿೆ ಕೊಡಿಸಬೇಕು. ಟನೆಯಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗದಂತೆ ಕ್ರಮವಹಿಸಬೇಕು. ಧರ್ಮ ವಿಷಯದಲ್ಲಿ ಪ್ರಚೋದನಕಾರಿ ಟನೆಗಳಾಗದಂತೆ ಎಚ್ಚರವಹಿಸಿ. ಶಾಲೆ&ಕಾಲೇಜು, ಯುವಸಮುದಾಯದಲ್ಲಿ ಶಾಂತಿ ಸಂದೇಶ ಸಾರಬೇಕು. ಆರೋಪಿಗಳು ಗಾಂಜಾ ಸೇವಿಸಿದ ಶಂಕೆ ಇದ್ದು ಗಾಂಜಾ ಜಾಲ ಪತ್ತೆ ಮಾಡಬೇಕು. ಯಾವುದೇ ಸಮುದಾಯಕ್ಕೆ ನೋವಾಗದಂತೆ ಪ್ರಕರಣ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಸೋಲಿಡಾರಿಟಿ ಯೂಥ್ ಮೂವ್ಮೆಂಟ್ ಕರ್ನಾಟಕ ಜಿಲ್ಲಾಧ್ಯಕ್ಷ ಎಜಾಜ್ ಅಹ್ಮದ್, ಕಾರ್ಯದರ್ಶಿ ಮಹ್ಮದ್ ಯುಸೂಓ, ಸದಸ್ಯರಾದ ಮಹ್ಮದ್ ಗೌಸ್ ಪಟೇಲ್, ರಹೆಮತ ಹುಸೇನ ಇದ್ದರು.