

ಕೊಪ್ಪಳ : ನನ್ನ ಮಗ ಗವಿಸಿದ್ದಪ್ಪ ನಾಯಕನ ಕೊಲೆ ಖಂಡಿಸಿ ಆ.11ರಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ&ಮುಂಗಟ್ಟು ಮುಚ್ಚಿ ಸಹಕರಿಸಬೇಕೆಂದು ಗವಿನಾಯಕ ತಂದೆ ನಿಂಗಜ್ಜ ಮನವಿ ಮಾಡಿದರು.
ಪ್ರತಿಭಟನೆ ಹಿನ್ನೆಲೆ ಶುಕ್ರವಾರ ಜನವಾರ ರಸ್ತೆಯಲ್ಲಿ ಪ್ರಚಾರ ನಡೆಸಿ ಮಾತನಾಡಿದರು.
ಗಡಿಯಾರ ಕಂಬ ವೃತ್ತದಿಂದ ಅಶೋಕ ವೃತ್ತವರೆಗೆ ಬೃಹತ್ ಪ್ರತಿಭಟನೆ ನಡೆಯಲಿದೆ. ಎಲ್ಲ ಸಮುದಾಯ, ಸಂ&ಸಂಸ್ಥೆಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು. ನನ್ನ ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ವಿವಿಧ ಅಂಗಡಿಕಾರರ ಕಾಲಿಗೆ ನಮಸ್ಕರಿಸಿ ಮನವಿ ಮಾಡಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ಪಾಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ ಡೊಣ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ನಾಯಕ, ಪ್ರಮುಖರಾದ ವಿಜಯಕುಮಾರ ತಾಳಕೇರಿ, ಮಂಜುನಾಥ ಇದ್ದರು.
ವರದಾನಂದ ಶ್ರೀಗಳಿಂದ ಸಾಂತ್ವಾನ : ನಗರದ ಕುರುಬರ ಓಣಿಯ ಗವಿ ನಾಯಕ ಮನೆಗೆ ಶುಕ್ರವಾರ ತಿಂಥಣಿ ವಾಲ್ಮೀಕಿ ಮಠದ ವರದಾನಂದ ಸ್ವಾಮೀಜಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಸಮುದಾಯ ನಿಮ್ಮ ಬೆನ್ನಿಗಿದೆ. ಆತಂಕೊಪಡುವ ಅಗತ್ಯವಿಲ್ಲ. ಗವಿ ನಾಯಕ ಕೊಲೆಗೆ ನ್ಯಾಯ ಸಿಗಲಿದೆ ಎಂದು ಸಂತೈಸಿದರು. ಗವಿ ನಾಯಕ ತಂದೆ ನಿಂಗಜ್ಜ, ತಾಯಿ ದೇವಮ್ಮ ಇದ್ದರು.